ಬಂಟ್ವಾಳ: ಬೋಳಿಯಾರು ಸಮೀಪ ರಂತಡ್ಕದ ನವೀಕೃತ ಬದ್ರಿಯ ಜುಮಾ ಮಸೀದಿಯ ಉದ್ಘಾಟನೆ ಹಾಗೂ ಖಾಝಿ ಸ್ವೀಕಾರ ಕಾರ್ಯಕ್ರಮ ನಡೆಯಿತು.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ನವೀಕೃತ ಮಸೀದಿ ಉದ್ಘಾಟನೆ ಹಾಗೂ ವಕ್ಫ್ ನೆರವೇರಿಸಿದರು.
ಕೆ.ಪಿ.ಇರ್ಶಾದ್ ದಾರಿಮಿ ಮಿತ್ತಬೈಲು ಅವರು ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ರಂತಡ್ಕ ಬದ್ರಿಯ ಜುಮಾ ಮಸೀದಿ ಜಮಾಅತ್‌ನ ಖಾಝಿಯನ್ನಾಗಿ ಘೋಷಣೆ ಮಾಡಿದರು.
ರಂತಡ್ಕ ಬಿಜೆಎಂ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ರಂತಡ್ಕ ಖತೀಬ್ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ನಂದಾವರ ಖತೀಬ್ ಸಿದ್ದೀಕ್ ದಾರಿಮಿ, ಹನೀಫ್ ಹಾಜಿ ಮಂಗಳೂರು, ಹಾಜಿ ಅಬ್ದುಲ್ ರಜಾಕ್ ಬಿ.ಸಿ.ರೋಡು, ಹಾಜಿ ಫಕೀರಬ್ಬ ಮಾಸ್ಟರ್, ಹಾಜಿ ಸಮದ್ ಮಂಗಳೂರು, ಎಸ್‌ವೈಎಸ್ ಅಧ್ಯಕ್ಷ ಎಂ.ಆರ್. ಮಹಮ್ಮದ್, ಎಸ್‌ಕೆಎಸೆಸ್‌ಎಫ್ ಅಧ್ಯಕ್ಷ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/10/2020 07:52 am