ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಡಾ.ಬಾಬು ಜಗಜೀವನ್ ರಾಮ್ ಆದರ್ಶಗಳನ್ನು ಪಾಲಿಸಿ"

ಮುಲ್ಕಿ: ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಮಾದಿಗ ದಂಡೋರ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗದವರ ಏಳಿಗೆಗಾಗಿ ಶ್ರಮಿಸಿದ ಮಾಜೀ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 36ನೇ ಪುಣ್ಯತಿಥಿಯನ್ನು ಕೆಎಸ್ ರಾವ್ ನಗರದ ಗ್ರಂಥಾಲಯದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಡಾ. ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಪಂ ಸದಸ್ಯ ಈರಣ್ಣ ಅರಳಗುಂಡಿ ಮಾತನಾಡಿ ಡಾ. ಬಾಬು ಜಗಜೀವನ್ ರಾಮ್ ರವರು ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದು ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ರೂಡಿಸಿಕೊಳ್ಳಬೇಕಾಗಿದೆ ಎಂದರು.

ಮುಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ, ಮಾಜೀ ಸದಸ್ಯ ವಿಠ್ಠಲ್ ಎನ್ ಎಂ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ನಾಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಶಿವಾನಂದ ಆರ್‌ಕೆ, ಪೌರ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ರಮೇಶ್ ಹಂಗರಗಿ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/07/2022 07:03 pm

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ