ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಡ ಮಹಿಳೆಗೆ ನೆರವು ನೀಡಿದ ಪೊಲೀಸರಿಂದ ಸ್ಫೂರ್ತಿ ಪಡೆದ ಉದ್ಯಮಿ; ದಿನಸಿ ಸಾಮಗ್ರಿ ವಿತರಣೆ

ಬಂಟ್ವಾಳ: ಕೆಲವು ದಿನಗಳ ಹಿಂದೆ ಪೊಲೀಸರಿಬ್ಬರು ಪಂಜಿಕಲ್ಲು ಗರಡಿಯ ಬಳಿ ವಾಸವಾಗಿರುವ ಬಡ ಹಿರಿಯ ಮಹಿಳೆಯೊಬ್ಬರಿಗೆ ನೆರವು ನೀಡಿದ ವೀಡಿಯೊ ವೈರಲ್ ಆಗಿತ್ತು. ಇಂದು ಅದೇ ಹಿರಿಯ ಮಹಿಳೆಗೆ ವಾಮದಪದವು ಮಾವಿನಕಟ್ಟೆಯ ಉದ್ಯಮಿಯೊಬ್ಬರು ಚಪ್ಪಲಿ, ಬಟ್ಟೆಬರೆ ಸೇರಿದಂತೆ ಒಂದು ತಿಂಗಳ ದಿನಸಿ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಪೊಲೀಸ್ ಕಾನ್ ಸ್ಟೇಬಲ್ ಗಳಾದ ವಿಜಯ್ ಹಾಗೂ ಚಾಲಕ ವಿಶ್ವನಾಥ ಪೆರಾಜೆ ಅವರು ಪಂಜಿಕಲ್ಲು ನಿವಾಸಿ ಹಿರಿಯ ಮಹಿಳೆ ಜಿನ್ನು ಅವರಿಗೆ ನೆರವು ನೀಡಿದ್ದರು. ಇದೀಗ ವಿಶ್ವನಾಥ್ ಅವರ ಸ್ನೇಹಿತ ಬಿ.ಎಚ್.ಮೊಹಮ್ಮದ್ ರಫೀಕ್ ಅವರು ಈ ಹಿರಿಯ ಚೇತನಕ್ಕೆ ನೆರವು ನೀಡಿದ್ದಾರೆ.

ಸ್ನೇಹಿತ ವಿಶ್ವನಾಥ ಪೆರಾಜೆ ಅವರು ತನ್ನ ವಾಟ್ಸ್ ಆ್ಯಪ್ ನಲ್ಲಿ ಹಾಕಿದ್ದ ಸ್ಟೇಟಸ್ ಕಂಡು ರಫೀಕ್ ಅವರು ಮನ ಕರಗಿ ತಾನು ಕೂಡ ನೆರವು ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

01/03/2021 10:56 pm

Cinque Terre

9.12 K

Cinque Terre

0

ಸಂಬಂಧಿತ ಸುದ್ದಿ