ಮುಲ್ಕಿ: 'ಹೊಸ ಅಂಗಣ' ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ, ಜ್ಞಾನ ವರ್ಧನೆಗೆ ಸಾಹಿತ್ಯವೇ ಮದ್ದು. ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಡಾ.ಅಚ್ಚುತ ಕುಡ್ವ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್, ರಾಷ್ಟ್ರೀಯ ಬಿಲ್ಲವರ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ವಾಮನ ಕೋಟ್ಯಾನ್ ನಡಿಕುದ್ರು, 'ಹೊಸ ಅಂಗಣ' ಪತ್ರಿಕೆ ಸಂಪಾದಕ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಜಾಕ್ , ಪುರಂದರ ಸಾಲ್ಯಾನ್, ರವಿಚಂದ್ರ , ಜಯರಾಮ ಮುಲ್ಕಿ, ಕೃಷ್ಣಶೆಟ್ಟಿ, ಭಾಸ್ಕರ ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ 'ಹೊಸ ಅಂಗಣ' ಮಾಸ ಪತ್ರಿಕೆಯ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ದೈವಾರಾಧನೆ ಕಾಯಕದ ದೇವದಾಸ ಸಾಲ್ಯಾನ್ ಹಳೆಯಂಗಡಿ ಅವರನ್ನು ಗೌರವಿಸಲಾಯಿತು. ಡಾ.ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರು.
Kshetra Samachara
28/01/2021 11:39 am