ಸುಳ್ಯ: ಈಗೀಗ ಹೆಚ್ಚಿನ ಜನರು ಮಾಸ್ಕ್ ಹಾಕುವುದನ್ನೇ ಮರೆತಂತಿದೆ. ಮಾಸ್ಕ್ ಹಾಕದೆ ಸುತ್ತಾಡುವವರಿಗೆ ಪೊಲೀಸರು ದಂಡ ಹಾಕುತ್ತಿದ್ದರೂ ಹೆಚ್ಚಿನವರು ಕ್ಯಾರೇ ಎನ್ನುತ್ತಿಲ್ಲ.
ಇಂದು ಸುಳ್ಯ ಎಸ್.ಐ. ಹರೀಶ್ ಕುಮಾರ್ ಅವರು ಮಾಸ್ಕ್ ಹಾಕದೇ ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು, ದಂಡ ಹಾಕುವ ಬದಲು ತಾವೇ ಮಾಸ್ಕ್ ಕೊಟ್ಟು ಅದನ್ನು ಹಾಕಿಸಿ, ಬುದ್ಧಿಮಾತು ಹೇಳಿ ಕಳುಹಿಸಿ ವಿಶೇಷವಾಗಿ ಜಾಗೃತಿ ಮೂಡಿಸಿದ್ದಾರೆ.
ಪೊಲೀಸ್ ಠಾಣೆ ಎದುರು ಮಾಸ್ಕ್ ಹಾಕದೆ ಹೋಗುವವರನ್ನು ಹಿಡಿದು ದಂಡ ಹಾಕಿ, ಅವರಿಗೆ ಎಚ್ಚರಿಕೆ ನೀಡುವ ಕಾರ್ಯ ಪೊಲೀಸರು ಮಾಡುತ್ತಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ತಡೆದು ಎಸ್.ಐ. ಬಳಿ ಕಳುಹಿಸಿದರು. ಅವರಿಗೆ ದಂಡ ಹಾಕುವ ಬದಲು ಜಾಗೃತಿ ಪಾಠ ಮಾಡಿದ ಎಸ್ಐಯವರು, ತಾವೇ ಮಾಸ್ಕೊಂದನ್ನು ಆ ವ್ಯಕ್ತಿಗೆ ಹಾಕಿಸಿ ಪ್ರತೀ ದಿನ ಮಾಸ್ಕ್ ಹಾಕುವಂತೆ ಎಚ್ಚರಿಸಿ ಕಳುಹಿಸಿದರು.
Kshetra Samachara
19/01/2021 01:36 pm