ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎನ್ ಎಂಪಿಟಿ ಅಧ್ಯಕ್ಷ ಎ.ವಿ. ರಮಣಗೆ ಡಾಕ್ಟರೇಟ್ : ಇಂಟಕ್ ಸನ್ಮಾನ

ಮುಲ್ಕಿ: ನವಮಂಗಳೂರು ಬಂದರು ಮಂಡಳಿ ( ಎನ್ ಎಂಪಿಟಿ) ಅಧ್ಯಕ್ಷ ಎ.ವಿ. ರಮಣ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಖ್ಯ ವಿಷಯದಲ್ಲಿ ಪ್ರತಿಷ್ಠಿತ ಡಾಕ್ಟರೇಟ್ ಪದವಿ ಪಡೆದಿದ್ದು, ಈ ಖುಷಿಗೆ ಕೆನರಾ ಪೋರ್ಟ್ ಡಾಕ್ ವರ್ಕರ್ಸ್ ಯೂನಿಯನ್ ವತಿಯಿಂದ ಬುಧವಾರ ಅಭಿನಂದಿಸಿ ಸನ್ಮಾನಿಸಲಾಯಿತು.

ಇಂಟಕ್ ಮುಖಂಡ, ಎನ್ ಎಂ ಪಿಟಿ ಟ್ರಸ್ಟಿ ಅಬೂಬಕ್ಕರ್ ಕೃಷ್ಣಾಪುರ ಅವರು ಅಭಿನಂದಿಸಿ ಮಾತನಾಡಿ,

ನವಮಂಗಳೂರು ಬಂದರು ರಮಣ ಅವರ ಅವಧಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಕೆಲಸದ ಒತ್ತಡದ ನಡುವೆಯೂ ಡಾಕ್ಟರೇಟ್ ಪಡೆದಿರುವುದು ನಮಗೆಲ್ಲ ಸಂತೋಷ, ಹೆಮ್ಮೆ ತಂದಿದೆ ಎಂದರು.

ಸನ್ಮಾನ ಸ್ವೀಕರಿಸಿ ಎ.ವಿ.ರಮಣ ಮಾತನಾಡಿ, ಬಂದರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಕೆ.ಫಾರೂಕ್, ಎಂ. ಶಿವಣ್ಣ,ಭರತ್ ಕುಮಾರ್,ನಯನ್ ಕುಮಾರ್,ಚರಣ್ ದಾಸ್,ಸುಕುಮಾರ್ ನಾಯ್ಕ್,ಅನಿಲ್ ಡಿಸೋಜ,ಸದಾನಂದ ಶೆಟ್ಟಿ,ಹರೀಶ್ ಸುವರ್ಣ,ಅಶೋಕ್,ಟಿ.ಕೆ. ಕೋಯ,ಇಬ್ರಾಹಿಂ, ಶ್ರೀನಿವಾಸ ಮೂರ್ತಿ,ನರೇಶ್, ಸ್ಟೀವನ್ ಡಿಸೋಜ,ಯುವರಾಜ್ ರೈ

ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/12/2020 02:35 pm

Cinque Terre

6.59 K

Cinque Terre

0

ಸಂಬಂಧಿತ ಸುದ್ದಿ