ಮಂಗಳೂರು: ಮಂಗಳೂರು ಮಾಜಿ ಮೇಯರ್ ,ಕಾಂಗ್ರೆಸ್ ಹಿರಿಯ ಮುಖಂಡ ಕೆ.ಕೃಷ್ಣಪ್ಪ ಮೆಂಡನ್ (89) ಶುಕ್ರವಾರ ಮುಂಜಾನೆ ಅಳಪೆಯ ಸ್ವಗೃಹದಲ್ಲಿ ನಿಧನರಾದರು.
ಕಂಕನಾಡಿ, ಅಳಪೆ ವಾರ್ಡ್ ನಿಂದ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
ಅತ್ತಾವರ ಶ್ರೀ ವಿಷ್ಣುಮೂರ್ತಿ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ಅಳಪೆ ಕರ್ಮಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕರಾವಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಕಂಕನಾಡಿ ಯುವಕ ವೃಂದ ಸ್ಥಾಪಕ ಸದಸ್ಯರಾಗಿದ್ದರು. ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
Kshetra Samachara
04/12/2020 09:02 pm