ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಪಟ್ಟಾಭಿಷೇಕ ರಜತ‌ ಸಂಭ್ರಮ; ಅಜಿಲರಿಗೆ ಯುವ ಪ್ರತಿಭೆಗಳಿಂದ ಕಲಾ ಗೌರವ

ಮೂಡುಬಿದಿರೆ : ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಕ್ಕೆ ಮೂಡುಬಿದಿರೆಯ ಯುವ ಕಲಾವಿದರಿಬ್ಬರು ತಮ್ಮ ಪ್ರತಿಭೆ ಮೂಲಕ ಗೌರವ ಸಲ್ಲಿಸಿದ್ದಾರೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ, ಒಂಟಿಕಟ್ಟೆಯ ನಿವಾಸಿ ತಿಲಕ್ ಕುಲಾಲ್ ಅವರು ಲೀಫ್ ಆರ್ಟ್ ಮೂಲಕ ಹಲವು ಗಣ್ಯರ ಚಿತ್ರಗಳನ್ನು ಬಿಡಿಸಿದ್ದು, ಅಶ್ವತ್ಥ ಎಲೆಯಲ್ಲಿ‌ ಅಜಿಲರ ಚಿತ್ರ ಬಿಡಿಸಿ ಅವರಿಗೆ ನೀಡಿದ್ದಾರೆ.

ಮೂಡುಬಿದಿರೆ ಮಾರ್ನಾಡಿನ ಯುವ ಕಲಾವಿದ ಶ್ರವಣ್ ಪೂಜಾರಿ ಅವರು ಚಾರ್ಕೋಲ್ ಆರ್ಟ್ ನಲ್ಲಿ ಬ್ರೂ ಕಾಫಿ ಹುಡಿ ಬಳಸಿ ಅಜಿಲರ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/12/2020 05:31 pm

Cinque Terre

5.02 K

Cinque Terre

0

ಸಂಬಂಧಿತ ಸುದ್ದಿ