ಮಂಗಳೂರು: ನಗರದ ಹೊರವಲಯದ ಪೂಪಾಡಿ ಕಲ್ಲು ಶಾಲೆಯಲ್ಲಿ ತುಳಸಿ ಫ್ರೆಂಡ್ಸ್ ಕ್ಲಬ್( ರಿ) ಪೂಪಾಡಿ ಕಲ್ಲು, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಮಂಗಳೂರು ಲಯನ್ಸ್ ಹಾಗೂ ಲಿಯೋ ಕ್ಲಬ್ ಮುಚ್ಚೂರು ನೀರುಡೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಇನಾಯತ್ ಆಲಿ ಉದ್ಘಾಟಿಸಿ ಮಾತನಾಡಿ ರಕ್ತದಾನದ ಮೂಲಕ ಸಾಮಾಜಿಕ ಚಟುವಟಿಕೆ ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಇರುವೈಲು ಗ್ರಾ ಪಂ ಅಧ್ಯಕ್ಷ ವಲೇರಿಯನ್ ಕುಟ್ಟಿನೊ, ಮಾಜಿ ಜಿ ಪಂ ಸದಸ್ಯ ಜನಾರ್ದನ ಗೌಡ, ಕೆಪಿಸಿಸಿ ಸದಸ್ಯರಾದ ಆರ್ ಕೆ ಪೃಥ್ವಿರಾಜ್, ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಅಧ್ಯಕ್ಷ ಸ್ಟ್ಯಾನಿ ಮಿರಾಂಡಾ ಉಪಾಧ್ಯಕ್ಷ ರೋಷನ್ ಡಿಸೋಜಾ ಶಿಕ್ಷಕರಾದ ವಾಸುಕೆ, ರಾಮಗೌಡ ಮಿಜಾರು, ಉದ್ಯಮಿ ಸೋಮಶೇಖರ್, ಗ್ರಾ ಪಂ ಮಾಜಿ ಅಧ್ಯಕ್ಷ ಮೊಯಿದಿನ್ ಸಾಬ್ ಬಾವ ಪೂಪಾಡಿಕಲ್ಲು ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಸಾಲ್ಯಾನ್, ಎಂ ಎಫ್ ಮುಸ್ತಫಾ ಶಾಲೆಯ ಮುಖ್ಯ ಶಿಕ್ಷಕ ಸೋಫಿಯಾ ಪಿಂಟೋ ಉಪಸ್ಥಿತರಿದ್ದರು.
ತುಳಸಿ ಫ್ರೆಂಡ್ಸ್ ಅಧ್ಯಕ್ಷ ಲತೀಶ್ ಸುವರ್ಣ,ಸಂದೀಪ್, ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 110 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಸಾಧಕ ಶಿಕ್ಷಕರಿಗೆ ಗೌರವ, ಸಮವಸ್ತ್ರ ವಿತರಣೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.
Kshetra Samachara
19/09/2022 12:52 pm