ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬೃಹತ್ ವೈದ್ಯಕೀಯ ಶಿಬಿರ, ಸಾಧಕರಿಗೆ ಗೌರವ

ಮುಲ್ಕಿ: ಮಂಗಳೂರುಲಯನ್ಸ್ ಹಾಗೂ ಲಿಯೋ ಕ್ಲಬ್, ವಿನಯ ಕೃಷಿ ಬೆಳೆಗಾರರ ಸಂಘ ಕೋಲ್ನಾಡು, ಕೆಎಂಸಿ ಆಸ್ಪತ್ರೆ ಅತ್ತಾವರ, ಕೆಎಸ್ ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ(ರಿ), ಮುಲ್ಕಿ ವಲಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಹಯೋಗದಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ಬೃಹತ್ ವೈದ್ಯಕೀಯ ಶಿಬಿರ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕೆಎಸ್ ರಾವ್ ನಗರದ ಶ್ರೀ ನಾರಾಯಣ ಗುರು ಸಭಾಗೃಹ ದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ನ ಅಧ್ಯಕ್ಷರಾದ ಸುಮಿತ್ರ ವಿ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಧ.ಗ್ರಾ.ಯೋ ಮುಲ್ಕಿ ವಲಯದ ಯೋಜನಾಧಿಕಾರಿ ಚಂದ್ರಶೇಖರ ನಾಯಕ್, , ಸಂಘದ ಅಧ್ಯಕ್ಷ ರಾಘವ ಸುವರ್ಣ, ಲಯನ್ ಸಂಸ್ಥೆಯ ಶ್ರೀಧರ್, ಲೋಕೇಶ್ ಶೆಟ್ಟಿ, ವಿನಯ ಕೃಷಿ ಬೆಳೆಗಾರರ ಸಂಘದ ವಿಜಯ ಶೆಟ್ಟಿ ಕೋಲ್ನಾಡು, ಕೆಎಂಸಿ ವೈದ್ಯ ಡಾ. ಪ್ರಶಾಂತ್, ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್ ಆರ್ ಕೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೈದ್ಯಬ್ರಹ್ಮ ಪ್ರಶಸ್ತಿ ವಿಜೇತ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಹಾಗೂ ವೈದ್ಯ ದಿನಾಚರಣೆ ಅಂಗವಾಗಿ ಸಾಧಕ ವೈದ್ಯರನ್ನು ಗೌರವಿಸಲಾಯಿತು. ವಿನಯ ಕೃಷಿ ಬೆಳೆಗಾರರ ಸಂಘದ ಸಂತೋಷ್ ಶೆಟ್ಟಿ ನಿರೂಪಿಸಿದರು. ಎನ್. ಟಿ. ರಾಜ ಧನ್ಯವಾದ ಅರ್ಪಿಸಿದರು ಬಳಿಕ ವೈದ್ಯಕೀಯ ಶಿಬಿರ ನಡೆಯಿತು.

Edited By : PublicNext Desk
Kshetra Samachara

Kshetra Samachara

03/07/2022 11:41 am

Cinque Terre

3 K

Cinque Terre

0

ಸಂಬಂಧಿತ ಸುದ್ದಿ