ಮುಲ್ಕಿ:ಮಂಗಳೂರಿನ ಎ ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾ ವಿದ್ಯಾಲಯದ ಪಬ್ಲಿಕ್ ಹೆಲ್ತ್ ಡೆಂಟೆಸ್ತ್ರಿ ವಿಭಾಗ ಮತ್ತು ಹೆಜಮಾಡಿ ಕೋಡಿಯ ನಿಟ್ಟೆ ಮೀನಾಕ್ಷಿ ಹೆಗ್ಡೆ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ಒರಲ್ ಹೆಲ್ತ್ ಅವಾರ್ ನೆಸ್ ಮತ್ತು ರಾಷ್ತ್ರೀಯ ಸಾರ್ವಜನಿಕ ದಂತ ಆರೋಗ್ಯ ದಿನಾಚರಣೆ ಕುರಿತ ಪಪೆಟ್ ಶೋ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಎ ಬಿ ಶೆಟ್ಟಿ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ಡೆಂಟಿಸ್ತ್ರಿ ವಿಭಾಗದ ಮುಖ್ಯಸ್ತ ಡಾ.ಆಂಡ್ರೆ ಡಿ ಕ್ರೂಸ್ ರವರು ರಾಷ್ತ್ರೀಯ ಸಾರ್ವಜನಿಕ ದಂತ ಆರೋಗ್ಯ ದಿನಾಚರಣೆ ಕುರಿತು ಮಾಹಿತಿ ನೀಡಿದರು.
ದಂತ ಆರೋಗ್ಯದ ಬಗ್ಗೆ ಡಾ.ಸಹನಾ ಮಾಬೆನ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಬಳಿಕ ಪಪೆಟ್ ಶೋ ಮೂಲಕ ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು.ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಭಂಡಾರಿ,ಸಮಾಜ ಸೇವಕ ಜಯಕರ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು ವಿಜಯಲಕ್ಷ್ಮೀ ಸ್ವಾಗತಿಸಿದರು,ಹೆಜಮಾಡಿ ಕೋಡಿಯ ಆರೋಗ್ಯ ಕೇಂದ್ರದ ಡಾ.ದೀಕ್ಷಾ ವಂದಿಸಿದರು.
Kshetra Samachara
21/06/2022 09:51 pm