ಮುಲ್ಕಿ:ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್, ಉಪಕೇಂದ್ರ ಥಾಮಸ್ಕಟ್ಟೆ ಸಹಯೋಗದೊಂದಿಗೆ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮವು, ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಅನುಸರಿಸುವ ಬಗ್ಗೆ ಮಾಹಿತಿ ಶಿಬಿರ ಕಿನ್ನಿಗೋಳಿ ಸಮೀಪದ ಶಾಂತಿಪಲ್ಕೆಯ ಸಮಾಜ ಮಂದಿರದಲ್ಲಿ ನಡೆಯಿತು.
ಕೆಮ್ರಾಲ್ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಸುಮಾ ಮಲೇರಿಯಾದ ಬಗ್ಗೆ ಮಾಹಿತಿ ನೀಡಿದರು.
ಧಾಮಸ್ಕಟ್ಟೆ ಉಪಕೇಂದ್ರದ ಸಮುದಾಯದ ಅಥಿಕಾರಿ ಶ ಅಶ್ವಿತಾ, ಕೇಂದ್ರದಲ್ಲಿ ಸಿಗುವ ವೈದ್ಯಕೀಯದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಗ್ರಾ ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್, ಆಶಾ ಕಾರ್ಯಕರ್ತೆ ಶರ್ಮೀಳಾ, ಕುಶಲತಾ ಸೀತಾ ಸಾಲ್ಯಾನ್, ಶ್ರೀಕಲಾ,ಸುಮತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
29/05/2022 09:52 pm