ಸುರತ್ಕಲ್: ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನ ನೂತನ ಮೊಬೈಲ್ ಡೆಂಟಲ್ ಕ್ಲಿನಿಕ್ ವ್ಯವಸ್ಥೆಯನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕಾದರೆ ಓದಿನ ಜೊತೆಗೆ ಸಾರ್ವಜನಿಕರಲ್ಲಿ , ಚಿಕಿತ್ಸೆಗೆ ಬರುವ ರೋಗಿಗಳನ್ನು ಉಪಚರಿಸುವ, ಅವರ ಜತೆ ಸೂಕ್ತ ಸಂಹವನ ನಡೆಸಿ ಅವರ ಯಾವುದೇ ರೋಗವಿದ್ದರೂ ಗುಣಮುಖವಾಗುತ್ತದೆ ಎಂಬ ವಿಶ್ವಾಸ ತುಂಬುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಶ್ರೀನಿವಾಸ್ ಸಮೂಹ ಸಂಸ್ಥೆಗಳ ಸಹ ಕುಲಾಧಿಪತಿ ಎ.ಶ್ರೀನಿವಾಸ ರಾವ್, ಡೆಂಟಲ್ ಸೈನ್ಸ್ ವಿಭಾಗದ ಎಚ್ ಒ ಡಿ ಡಾ.ನಿತೇಶ್ ಶೆಟ್ಟಿ, ರಿಜಿಸ್ಟ್ರಾರ್ ಅನಿಲ್ ಕುಮಾರ್, ಡೀನ್ ರೇಷ್ಮಾ ಪೈ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/04/2022 08:40 pm