ನಿಡ್ಡೋಡಿ: ಸ್ವಾಮಿ ವಿವೇಕಾನಂದ ಸೇವಾ ಸಂಸ್ತೆ(ರಿ) ಕಿನ್ನಿಗೋಳಿ,ಆಳ್ವಾಸ್ ಆಸ್ಪತ್ರೆ ಮೂಡುಬಿದಿರೆ,ಬಾಪೂಜಿ ಕಲ್ಚರಲ್ ಆಂಡ್ ಗೇಮ್ಸ್ ಕ್ಲಬ್ ,ನಿಡ್ಡೋಡಿ ಮತ್ತು ಲವ್ಲಿ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್ ನಿಡ್ಡೋಡಿಯ ಸಂಯುಕ್ತ ಆಶ್ರಯದಲ್ಲಿ ನಿಡ್ಡೋಡಿಯ ಸತ್ಯನಾರಾಯಣ ಶಾಲೆಯಲ್ಲಿ ಮೇಘಾ ಉಚಿತ ಆರೋಗ್ಯ ತಪಾಸಣಾ ಶಿಬಿರ,ರಕ್ತದಾನ ಶಿಬಿರ, ಹಾಗೂ ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು
ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯ ಅಧ್ಯಕ್ಷ ಡಾ|ವಿನಯ್ ಎಂ ಆಳ್ವಾ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ತೆ(ರಿ) ಕಿನ್ನಿಗೋಳಿಯ ಅಧ್ಯಕ್ಷ ಡಾ|ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯು ಬಡವರ ಹಿಂದುಳಿದವರ ಆರೋಗ್ಯದ ಕಾಳಜಿ ವಹಿಸಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಗ್ರಾಮೀಣ ಭಾಗದಲ್ಲಿ ಉತ್ತಮ ಬೆಂಬಲ ದೊರಕಿದೆ ಎಂದರು
ನಿಡ್ಡೋಡಿ ಬಂಟರ ಸಂಘದ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್.ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷ ಕೇಶವ ಪೂಜಾರಿ,ನಿಡ್ಡೋಡಿ ಎಸ್ ಎನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಯದು ನಾರಾಯಣ ಶೆಟ್ಟಿ,ಜ್ಞಾನ ರತ್ನ ಎಜುಕೇಶನ್ ಫೌಂಡೇಶನ್ ನ ಅಧ್ಯಕ್ಷ ಭಾಸ್ಕರ ದೇವಸ್ಯ,ನಿಡ್ಡೋಡಿ ಬಿಲ್ಲವ ಸಂಘದ ಅಧ್ಯಕ್ಷ ಎಸ್ ಎನ್ ಸಾಲ್ಯಾನ್,,ಬಾಪೂಜಿ ಕಲ್ಚರಲ್ ಮತ್ತು ಗೇಮ್ಸ್ ಕ್ಲಬ್ ನಿಡ್ಡೋಡಿಯ ಅಧ್ಯಕ್ಷ ಯಶವಂತ ಶೆಟ್ಟಿ,ಸ್ವಾಮಿ ವಿವೇಕಾನಂದ ಸೇವಾ ಸಂಸ್ತೆ(ರಿ) ಕಿನ್ನಿಗೋಳಿಯ ಅಧ್ಯಕ್ಷ ಡಾ|ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿವಿಧ ಕಾರ್ಯಕ್ರಮಗಳು ನಡೆಯಿತು.
Kshetra Samachara
07/03/2022 05:46 pm