ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಉಚಿತ ನೇತ್ರ ತಪಾಸಣೆ

ಮುಲ್ಕಿ: ಸಂಘ ಸಂಸ್ಥೆಗಳು ಶಿಬಿರಗಳ ಮೂಲಕ ಜನರ ಆರೊಗ್ಯಕ್ಕೆ ಒತ್ತು ನೀಡುವ ಕಾರ್ಯ ಮಾಡಬೇಕೆಂದು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಕಿನ್ನಿಗೋಳಿ,ಯುಗಪುರುಷ ಕಿನ್ನಿಗೋಳಿ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಗಳೂರು ತಾಲೂಕು(ಮೆನ್ನಬೆಟ್ಟು,ಐಕಳ,ಬಳ್ಕುಂಜೆ,ಏಳಿಂಜೆ,ಕಟೀಲು),ಭ್ರಾಮರಿ ಮಹಿಳಾ ಸಮಾಜ(ರಿ) ಮೆನ್ನಬೆಟ್ಟು,ಕಿನ್ನಿಗೋಳಿಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಅತ್ತಾವರ ಕೆ ಎಂ ಸಿ ಆಸ್ಪತ್ರೆಯ ಸಹಯೋಗದಲ್ಲಿ ಆದಿತ್ಯವಾರ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುಗಪುರುಷದ ಸಂಪಾದಕ ಕೆ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕೆಎಂಸಿ ನೇತ್ರ ವೈದ್ಯರಾದ ಡಾ|ರೀಜಾ ಮಾಹಿತಿ ನೀಡಿದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ದಾ ಡಿಸೋಜ, ನಿಡ್ಡೋಡಿ ಬಂಟರ ಸಂಘದ ಗೌರವಾಧ್ಯಕ್ಷೆ ಶಾಂಭವಿ ಶೆಟ್ಟಿ , ಲಯನ್ಸ್ ಪುರುಷೋತ್ತಮ ಶೆಟ್ಟಿ , ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಶಿಬಿರಲ್ಲಿ ಉಚಿತ ಕನ್ನಡಕ ವಿತರಣೆ ನಡೆಯಿತು. ಶುಭಲತಾ ಶೆಟ್ಟಿ ಸ್ವಾಗತಿಸಿದರು. ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ಅನುಷಾ ಕರ್ಕೇರಾ ವಂದಿಸಿದರು. 225 ಮಂದಿ ಕಣ್ಣಿನ ತಪಾಸಣೆ ನಡೆಸಿದರೆ 95 ಮಂದಿಗೆ ಕನ್ನಡಕ ವಿತರಣೆ ನಡೆಯಿತು. 25 ಮಂದಿಗೆ ಚಿಕಿತ್ಸೆ ಶಿಫಾರಾಸು ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

31/10/2021 09:39 pm

Cinque Terre

1.4 K

Cinque Terre

1

ಸಂಬಂಧಿತ ಸುದ್ದಿ