ಮುಲ್ಕಿ: ಕಲಿಯುಗದ ಕಷ್ಟ ಕಾಲದಲ್ಲಿ ಭಗವಂತನ ನಾಮ ಜಪವು ಬಹಳ ಪರಿಣಾಮಕಾರಿ ನಾವು ಮಾಡುವ ಸತ್ಕರ್ಮಗಳು ನಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜನರಿಂದ ಜನರಿಗೆ ಲಭಿಸಿದ ಸಹಾಯ ಸಹಕಾರ ಕಾರ್ಯಗಳಿಂದ ನಿಜವಾಗಿದೆಯೆಂದು ಮಂಗಳೂರು ಇಸ್ಕಾನ್ ಅಕ್ಷಯಪಾತ್ರ ಫೌಂಡೇಶನ್ ಸಿಇಓ ಮತ್ತು ಇಸ್ಕಾನ್ ಕೋವಿಡ್ ಪರಿಹಾರ ಕಾರ್ಯ ಸಂಯೋಜಕರಾದ ಸ್ವಾಮೀ ಸನಂದನದಾಸ ಹೇಳಿದರು.ಮೂಲ್ಕಿ ಜಿಎಸ್‌ಬಿ ಸಭಾಗ್ರಹದಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಭಾ ಮೂಲ್ಕಿ ಮತ್ತು ಕೊಡಿಕಲ್ ಮಂಗಳೂರು, ಅಕ್ಷಯ ಪಾತ್ರ ಫೌಂಡೇಶನ್ ಮಂಗಳೂರು ಇವರ ಕೋವಿಡ್ ಪರಿಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು. ಈ ಸಂದರ್ಭ ಜಿಎಸ್‌ಬಿ ಸಭಾ ಮೂಲ್ಕಿ ವತಿಯಿಂದ ಇಸ್ಕಾನ್ ಕೋವಿಡ್ ಪರಿಹಾರ ಕಾರ್ಯ ಸಂಯೋಜಕರಾದ ಸ್ವಾಮೀ ಸನಂದನದಾಸ ರವರನ್ನು ಗೌರವಿಸಲಾಯಿತು ಬಳಿಕ 125 ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು.
ಇಸ್ಕಾನ್ ಪ್ರತಿನಿಧಿ ಕುಂಬ್ಳೆ ನರಸಿಂಹ ಪ್ರಭು, ಕೋಡಿಕಲ್ ಜಿಎಸ್‌ಬಿ ಸಭಾ ಅಧ್ಯಕ್ಷ ಎಸ್.ಗಣೇಶ್ ಕಾಮತ್,ಮೂಲ್ಕಿ ಜಿಎಸ್‌ಬಿ ಸಭಾ ಅಧ್ಯಕ್ಷ ಎಂ ಸತ್ಯೇಂದ್ರ ಶೆಣೈ, ಉಪಾಧ್ಯಕ್ಷ ಯು ಬಾಬ್ರಾಯ ಶೆಣೈ, ಕಾರ್ಯದರ್ಶಿ ವಿನೋದ್ ಶೆಣೈ,ಕೋಶಾಧಿಕಾರಿ ವಿಶ್ವನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಸತ್ಯೇಂದ್ರ ಶೆಣೈ ಸ್ವಾಗತಿಸಿದರು. ವಿನೋದ್ ಶೆಣೈ ನಿರೂಪಿಸಿದರು. ವಿಶ್ವನಾಥ ಶೆಣೈ ವಂದಿಸಿದರು.
Kshetra Samachara
01/02/2021 07:19 pm