ಮಂಗಳೂರು: ಕೊರೊನಾ ದಿಮದಾಗಿ ಕೆಲಸ ಕಳೆದು ಕೊಮಡು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳ ಮೇಲೆ ಮಂಗಳೂರು ನಗರ ಸಭೆ ಮುಂದಿನವಾರದಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾಹತಿ ನೀಡಿರುವ ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ, ಬೀದಿಬದಿ ವ್ಯಾಪಾರಕ್ಕೆ ಮನಪಾಯಿಂದ ಪರವಾನಿಗೆ ಪಡೆಯದೇ, ಕೋವಿಡ್ ಕಾರಣದಿಂದ ಕೆಲಸವಿಲ್ಲದೆ ನಗರದ ಬೀದಿ ಬದಿಗಳಲ್ಲಿ ಮೀನು, ಹಣ್ಣಿನ ವ್ಯಾಪಾರ ನಡೆಸುತ್ತಿರುವವರನ್ನು ತೆರವುಗೊಳಿಸಲು ಮುಂದಿನ ವಾರದಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಿಂದಾಗಿ ಕೆಲಸ ಕಳೆದುಕೊಂಡು ಸದ್ಯ ಬೀದಿಬದಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬ ಸಲಹುತ್ತಿರುವವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
Kshetra Samachara
24/09/2020 09:57 pm