ಕಾಸರಗೋಡು : ಡೆಡ್ಲಿ ಕೊರೊನಾಗೆ ಜಗತ್ತೇ ತತ್ತರಿಸಿದೆ ಕೇರಳದಲ್ಲಿ ಹಾವಳಿ ತುಸು ಹೆಚ್ಚಾಗಿದೆ.
ಹಾಗಾಗಿ ಕೇರಳದಲ್ಲಿ ನಾಳೆ ( ಅ.3) ಯಿಂದ ಅಕ್ಟೋಬರ್ 31 ರ ತನಕ ಕೋವಿಡ್ ನಿಯಂತ್ರಣ ಹಿನ್ನಲೆಯಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ನೀಡಲಾಗಿದೆ.
ಇದರಂತೆ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅಕ್ಟೋಬರ್ 3 ರ ಬೆಳಿಗ್ಗೆ 9 ರಿಂದ 31 ರ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಆಯಾ ಜಿಲ್ಲೆಗಳ ಸ್ಥಿತಿ ಗತಿ ಮನಗಂಡು ನಿಯಂತ್ರಣಗಳಲ್ಲಿ ಸಡಿಲಿಕೆ ಬೇಕೆ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ.
ವಿವಾಹ, ಮರಣ ನಂತರದ ಕಾರ್ಯಕ್ರಮ ಮೊದಲಾದವುಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಕೋವಿಡ್ ಮಾನದಂಡದಂತೆ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ.
Kshetra Samachara
02/10/2020 05:23 pm