ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ನೆಲಗುಡ್ಡೆ ನಿವಾಸಿ ಪುರುಷೋತ್ತಮ ಪೂಜಾರಿಯವರು ಅನಾರೋಗ್ಯ ದಿಂದ ಮುಲ್ಕಿಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಎರಡು ವಾರ ಚಿಕಿತ್ಸೆ ಪಡೆದು ಆಸ್ಪತ್ರೆ ಯಿಂದ ಬಿಡುಗಡೆಯಾಗುವಾಗ ಹಣವಿಲ್ಲದ ಕಂಗಾಲಾಗಿದ್ದರು.
ಪುರುಷೋತ್ತಮ ಪೂಜಾರಿಯವರಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸಂಪೂರ್ಣ ಆರೋಗ್ಯ ಕಾರ್ಡ್ ಇದ್ದು ಎಲ್ಲಾ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ.
ಕೊನೆಗೆ ಇವರು ದಲಿತ ಸಂಘರ್ಷ ಸಮಿತಿಯ ಮಂಗಳೂರು ಸಂಚಾಲಕರಾದ ಸೂರ್ಯಪ್ರಕಾಶ್ ನೆಲಗುಡ್ಡೆ ಮತ್ತು ಪ್ರಶಾಂತ್ ನೆಲಗುಡ್ಡೆ ಅವರಲ್ಲಿ ತಿಳಿಸಿ ಸಹಾಯ ಮಾಡುವಂತೆ ವಿನಂತಿಸಿದ್ದರು.
ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಬಿರುವೆರ್ ಮುಲ್ಕಿ ಸಂಘಟನೆ ಅಧ್ಯಕ್ಷರಾದ ಕಿಶೋರ್ ಅವರಲ್ಲಿ ವಿಷಯ ತಿಳಿಸಿದಾಗ ಅವರು ಆಸ್ಪತ್ರೆಗೆ ಭೇಟಿ ನೀಡಿ, ಬಾಕಿ ಇರುವ ಬಿಲ್ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.
Kshetra Samachara
29/10/2020 09:48 am