ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ : ನೇತಾಜಿ ಬ್ರಿಗೇಡ್‌ನಿಂದ ಉಚಿತ ವೈದ್ಯಕೀಯ ಶಿಬಿರ, ಬೃಹತ್ ಆಧಾರ್ ನೋಂದಾಣಿ

ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ), ಮೂಡುಬಿದಿರೆ ಇದರ 3ನೇ ವರ್ಷದ ವಾರ್ಷಿಕೋತ್ಸವದಂಗವಾಗಿ ನಿಟ್ಟೆ ಗಜ್ರಯಾ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಕಳ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಬೆದ್ರ ಜನಸೇವಾ ಕೇಂದ್ರ ಮತ್ತು ವಿ ಹೆಲ್ತ್‌ ಟ್ರಸ್ಟ್ ಆಲಂಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಜರ, ಉಚಿತ ಬೃಹತ್‌ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಕಾರ್ಯಕ್ರಮವು ಸಮಾಜ ಮಂದಿ ರದಲ್ಲಿ ಭಾನುವಾರ ನಡೆಯಿತು.

ಶಾಸಕ ಉಮಾನಾಥ ಕೋಟ್ಯಾನ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾ ನವೀಯತೆ ಇಲ್ಲದಿದ್ದರೆ ಆತ ಮನುಷ್ಯನಾಗಲು ಸಾಧ್ಯವಿಲ್ಲ. ಕಳೆದ ೩ ವರ್ಷಗಳಿಂದ ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ನೇತಾಜಿ ಬ್ರಿಗೇಡ್ ಸಂಘಟನೆಯು ಮಾನವೀಯ ಅಂಶಗಳನ್ನು ಇಟ್ಟುಕೊಂಡು ಜನ ಸಾಮಾನ್ಯರಿಗೆ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿರುವುದಲ್ಲದೆ ಸಮಾಜದಲ್ಲಿ ಮಾನವೀಯತೆಯ ನ್ನು ಹುಟ್ಟುಹಾಕುವಂತಹ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ ನಮ್ಮ ದೇಶದಲ್ಲಿ ನಾವು ಎಷ್ಟೇ ಸಬಲರಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಕೆಲವರು ಹಿಂದುಳಿದಿದ್ದಾರೆ. ಇವರೆಲ್ಲರನ್ನು ನಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಇಂತಹ ಸಂಘಟನೆಯು ಮಾಡಬೇಕಾಗಿದೆ ಎಂದ ಅವರು ಮುಂದಿನ ಡಿಸೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆಯುವ ಅಂತರಾಷ್ಟ್ರೀಯ ಜಂಬೂರಿ ಕಾರ್ಯಕ್ರಮದಲ್ಲಿ ಸಹಕರಿಸುವಂತೆ ಕೇಳಕೊಂಡರು.

Edited By : PublicNext Desk
Kshetra Samachara

Kshetra Samachara

09/10/2022 10:22 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ