ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧ್ಯಾತ್ಮದ ಕಡೆ ಒಲವಿದ್ದರೆ ಆರೋಗ್ಯಪೂರ್ಣ ಬದುಕು: ಒಡಿಯೂರು ಶ್ರೀ

ಬಂಟ್ವಾಳ: ಪ್ರತಿಯೊಬ್ಬರೂ ಆಧ್ಯಾತ್ಮಿಕದೆಡೆಗೆ ಅಂಟಿಕೊಂಡಾಗ ಆರೋಗ್ಯಪೂರ್ಣ ಬದುಕು ನಿರ್ಮಾಣಗೊಳ್ಳುತ್ತದೆ. ಅಧ್ಯಾತ್ಮದಲ್ಲಿ ನಿಜ ಆನಂದ ಅಡಕವಾಗಿದೆ. ಎಲ್ಲಾ ರೋಗಗಳಿಗೆ ಔಷಧಿ ಅಧ್ಯಾತ್ಮದಲ್ಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ಲಲಿತಾ ಪಂಚಮಿ ಮಹೋತ್ಸವ - ಶ್ರೀ ಚಂಡಿಕಾ ಯಾಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಾಧ್ವಿ ಮಾತಾನಂದಮಯೀ ಉಪಸ್ಥಿತರಿದ್ದರು. ವೇ.ಮೂ. ಕೆರೆಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಮಂಗಳಾರತಿಯ ಬಳಿಕ ಶ್ರೀ ನಾಗದೇವರಿಗೆ ನಾಗತಂಬಿಲ, ಚಂಡಿಕಾ ಯಾಗ ಆರಂಭಗೊಂಡು ಮಧ್ಯಾಹ್ನ ಗಂಟೆ 12ಕ್ಕೆ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಆರಾಧ್ಯದೇವರಿಗೆ ಮಹಾಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಡಿ. ಮನೋಹರ ಕುಮಾರ್ ಯಕ್ಷಬಳಗ, ಮಂಗಳೂರು ಇವರಿಂದ ’ಶಾಂಭವಿ ವಿಜಯ’ ತುಳು ಯಕ್ಷಗಾನ ಬಯಲಾಟ. ರಾತ್ರಿ ಅಷ್ಟಾವಧಾನ ಸೇವೆ, ಮಹಾಪೂಜೆ ನಡೆಯಿತು.

Edited By :
Kshetra Samachara

Kshetra Samachara

20/10/2020 07:55 pm

Cinque Terre

3.41 K

Cinque Terre

0

ಸಂಬಂಧಿತ ಸುದ್ದಿ