ಮುಲ್ಕಿ: ಕಾರ್ನಾಡು ಮೆಗಾ ಪ್ಲಾಟ್ ಬಳಿಯ ರೋಟರಿ ಎಂ ನಾರಾಯಣ ಮತ್ತು ಮಮತಾ ನಾರಾಯಣ ರವರು ಕಾರ್ನಾಡಿನ ಆಪದ್ಬಾಂಧವ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್ ಗೆ ದಿನಸಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭ ಅವರು ಮಾತನಾಡಿ ಕಾರ್ನಾಡು ಮೈಮುನಾ ಫೌಂಡೇಶನ್ ನ ನಿರ್ದೇಶಕ ಆಸಿಫ್ ನೇತೃತ್ವದಲ್ಲಿ ಮುಲ್ಕಿ ಪರಿಸರದಲ್ಲಿ ಬಡವರಿಗೆ ದುರ್ಬಲ ವರ್ಗದವರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುವ ಮುಖಾಂತರ ಉತ್ತಮ ಕಾರ್ಯ ನಡೆಯುತ್ತಿದ್ದು ಇನ್ನಷ್ಟು ಉತ್ತಮ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮೈಮುನಾ ಫೌಂಡೇಶನ್ ನಿರ್ದೇಶಕ ಆಸಿಫ್ ಮಾತನಾಡಿ ಉತ್ತಮ ಕಾರ್ಯಗಳಿಗೆ ಜನಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದ ಅವರು ದಾನಿಗಳ ಮಾನವೀಯತೆ ನೆರವಿನಿಂದ ಆಶ್ರಮದ ಅತಿಥಿಗಳಿಗೆ ವಿಶೇಷ ಬಲ ಬಂದಂತಾಗಿದೆ ಎಂದು ಧನ್ಯವಾದ ತಿಳಿಸಿದರು.
Kshetra Samachara
19/10/2020 04:24 pm