ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿಗೆ ಥಳಿಸಿದ ಮಂಗಳಮುಖಿಗೆ ತಾಯಿಯಿಂದ ಕಪಾಳಮೋಕ್ಷ

ಶಿವಮೊಗ್ಗ: ಬಾಲಕಿಗೆ ಥಳಿಸಿದ ಹಿನ್ನೆಲೆಯಲ್ಲಿ ಮಂಗಳಮುಖಿಗೆ ಸಾರ್ವಜನಿಕರು ಸೇರಿ ಕಪಾಳಮೋಕ್ಷ ಮಾಡಿಸಿದ ಘಟನೆ ನಡೆದಿದೆ.

ಇಂದು ಗಾಡಿಕೊಪ್ಪ ಸರ್ಕಲ್‌ನ ಅಂಗಡಿಗಳಲ್ಲಿ ಹಣ ಕೇಳುತ್ತಾ ಬಂದ ಮಂಗಳಮುಖಿ, ಅಂಗಡಿ ಎದುರು ತನ್ನ ತಂದೆ-ತಾಯಿ ದಿನಸಿ ಕೊಳ್ಳುವುದನ್ನು ನೋಡುತ್ತಾ ನಿಂತಿದ್ದ ಬಾಲಕಿಗೆ ಚಟಾರನೇ ಹೊಡೆದಿದ್ದಾಳೆ.

ಸಿಟ್ಟಾದ ಬಾಲಕಿಯ ತಂದೆ ಮಂಗಳಮುಖಿಯನ್ನು ಗದರಿಸಿದ್ದಾರೆ. ಈ ವೇಳೆ ಮಂಗಳಮುಖಿ ಅಸಹ್ಯ ಭಾಷೆಯಲ್ಲಿ ಮಗು ಹಾಗೂ ಪತ್ನಿ ಎದುರೇ ನಿಂದಿಸಿದ್ದಾಳೆ.

ಈ ವೇಳೆ ಮಂಗಳಮುಖಿಯನ್ನು ಸುತ್ತುವರಿದ ಸ್ಥಳೀಯರು, ಮಗುವಿನ ತಾಯಿಯಿಂದ ಕಪಾಳಮೋಕ್ಷ ಮಾಡಿಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಮಾಹಿತಿ ನೀಡಿ ಇಪ್ಪತ್ತು ನಿಮಿಷ ಕಳೆದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ. ಮಂಗಳಮುಖಿ ಅಲ್ಲೇ ಸುತ್ತುತ್ತಿರುವುದು ಕಂಡು ಬಂತು.

Edited By : Nirmala Aralikatti
Kshetra Samachara

Kshetra Samachara

13/10/2020 09:12 pm

Cinque Terre

4.89 K

Cinque Terre

0

ಸಂಬಂಧಿತ ಸುದ್ದಿ