ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾಗೆ ತಲೆಯೇ ಕೆಡಿಸಿಕೊಳ್ಳದ ಜನ ಮನಪಾ ವ್ಯಾಪ್ತಿಯಲ್ಲಿ ‘ಮಾಸ್ಕ್ ಕಡ್ಡಾಯ’ ಅಭಿಯಾನ

ಮಂಗಳೂರು: ಮಂಗಳೂರಿನಲ್ಲಿ ಜನಸಾಮಾನ್ಯರು ಸಾರ್ವಜನಿಕ ಸ್ಥಳಗಳಲ್ಲಿಯೂ ಮಾಸ್ಕ್ ಇಲ್ಲದೆ ಓಡಾಡುತ್ತಿರುವುದು ಕಂಡು ಬಂರುತ್ತಿರುವುದರಿಂದ ಶೀಘ್ರವೇ ಮನಪಾ ವ್ಯಾಪ್ತಿಯಲ್ಲಿ ‘ಮಾಸ್ಕ್ ಕಡ್ಡಾಯ’ ಅಭಿಯಾನ ಆರಂಭಿಸಲಾಗುವುದು ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗಾಗಲೇ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ನವೀಕರಣ ಮಾಡದಿರುವವರು ತಕ್ಷಣ ಮಾಡಿಸ ಬೇಕು, ಈಗಾಗಲೇ ಕೊರೋನ ಹಿನ್ನೆಲೆಯಲ್ಲಿ ನವೀಕರಣಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎಂದರು.

ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ನಾಮಕರಣ ತರಾತುರಿಯಲ್ಲಿ ಮಾಡಲಾಗಿಲ್ಲ. ಕೋರ್ಟ್ ತೀರ್ಪಿನ ಪ್ರಕಾರ ಸರಕಾರ ಆದೇಶದ ಮೇರೆಗೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟ ಪಡಿಸಿದರು.

Edited By :
Kshetra Samachara

Kshetra Samachara

24/09/2020 09:53 pm

Cinque Terre

7.76 K

Cinque Terre

0

ಸಂಬಂಧಿತ ಸುದ್ದಿ