ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ. ಜಿಪಂ ಸಿಇಒ ಡಾ.ಸೆಲ್ವಮಣಿ ವರ್ಗಾವಣೆ; ಕುಮಾರ್ ನಿಯೋಜನೆ

ಮಂಗಳೂರು: ದ.ಕ. ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ವರ್ಗಾವಣೆಗೊಂಡಿದ್ದು, ತೆರವಾಗಿರುವ ಅವರ ಸ್ಥಾನಕ್ಕೆ ಕುಮಾರ್ ನೇಮಕಗೊಂಡಿದ್ದಾರೆ‌.ಡಾ.ಸೆಲ್ವಮಣಿ ಆರ್. ಅವರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ‌ ವರ್ಗಾವಣೆ ಮಾಡಲಾಗಿದೆ.

ಕುಮಾರ್ ಅವರು ಚಿಕ್ಕಮಗಳೂರು ಎಡಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಅವರು ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಕುಮಾರ್ ದ‌‌.ಕ. ಜಿಪಂ ಸಿಇಒ ಆಗಿ ಮತ್ತೆ ದ.ಕ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/02/2021 11:12 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ