ಬಂಟ್ವಾಳ: 2019ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆ ಗುರುತಿಸಿ ಸರಕಾರ ನೀಡುವ ಮುಖ್ಯ ಮಂತ್ರಿ ಪದಕಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಆಯ್ಕೆಯಾಗಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ತುಪ್ಪೂರು ಗ್ರಾಮದ ನಾಗರಾಜ್ ಅವರು 2003ರಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆಗೆ ಸೇರಿದ್ದರು. ಬಳಿಕ 2010 ರಲ್ಲಿ ವೃತ್ತ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದಾರೆ. ಅನೇಕ ಘಟನೆಗಳ ಸಂದರ್ಭ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಕಾನೂನು ಸುವ್ಯವಸ್ಥೆ ನಿಭಾಯಿಸಿದ್ದನ್ನು ಪರಿಗಣಿಸಲಾಗಿದೆ.
Kshetra Samachara
01/01/2021 08:21 pm