ಮುಲ್ಕಿ: ಸುರತ್ಕಲ್ ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಗೊಳಿಸುವ ನೆಪದಲ್ಲಿ ಸ್ಥಳೀಯ ವಾಹನಗಳ ರಿಯಾಯಿತಿ, ಉಚಿತ ಪ್ರಯಾಣ ರದ್ದುಗೊಳಿಸುವ ಯತ್ನ ವಿರೋಧಿಸಿ, ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದಲ್ಲಿ ವಿಲೀನಗೊಳಿಸುವ ತೀರ್ಮಾನ ಜಾರಿಯಾಗುವವರೆಗೆ ಯಥಾಸ್ಥಿತಿ ಕಾಪಾಡಲು ಆಗ್ರಹಿಸಿ "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್" ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಹರೀಶ್ ಪುತ್ರನ್, ಶಶಿ ಅಮೀನ್ ಮುಲ್ಕಿ, ಮಧು ಆಚಾರ್ಯ, ಇಕ್ಬಾಲ್ ಮುಲ್ಕಿ, ನೂರುಲ್ಲಾ ಕಾರ್ನಾಡ್, ನೌಷಾದ್, ತೌಸೀಫ್ ಬೆಂಗ್ರೆ, ಸದಾಶಿವ ಹೊಸದುರ್ಗ ಉಪಸ್ಥಿತರಿದ್ದರು.
Kshetra Samachara
31/12/2020 07:26 am