ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ವಿವೇಚನೆಯಿಂದ ನಡೆದಲ್ಲಿ ಜಗತ್ತು ಶಾಂತಿಯಿಂದ ಇರುತ್ತದೆ : ಸುಬ್ರಹ್ಮಣ್ಯ ಬೈಪಡಿತ್ತಾಯ

ಸುರತ್ಕಲ್: "ನಾವೆಲ್ಲರೂ ಸಾಮಾಜಿಕ ಸಾಮರಸ್ಯ ಕಾಪಾಡಬೇಕು. ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದು, ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು ಹಾಗೆಂದು ಕತ್ತಲನ್ನು ಕತ್ತಲಿಂದ ಓಡಿಸಲು ಆಗದು. ಇದನ್ನು ನಾವೆಲ್ಲರೂ ಅರಿತು ಪರಸ್ಪರ ಪ್ರೀತಿಯಿಂದ ಹೃದಯವನ್ನು ಗೆಲ್ಲಬೇಕು. ಇಸ್ಲಾಂ ಅದನ್ನೇ ಹೇಳಿದೆ. ವಿವೇಚನೆಯಿಂದ ನಡೆದುಕೊಂಡಲ್ಲಿ ಸಮಾಜ ಶಾಂತಿಯಿಂದ ಇರುತ್ತದೆ" ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಸುಬ್ರಮಣ್ಯ ಬೈಪಡಿತ್ತಾಯ ಹೇಳಿದರು.

ಅವರು ಕೃಷ್ಣಾಪುರ ಪ್ಯಾರಡೈಸ್ ಗ್ರೌಂಡ್ ನಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪ್ರತಿಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಂಗಳೂರು ಶಾಸಕ ಯು. ಟಿ. ಖಾದರ್ ಅವರು, "ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಇಂತಹ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ನಡೆಸುತ್ತಿದೆ. ಏನೇ ಆದರೂ ನಾವೆಲ್ಲರೂ ತಾಳ್ಮೆಯಿಂದ ಇರಬೇಕು. ಭಾರತ ದೇಶದಷ್ಟು ಒಳ್ಳೆಯ ದೇಶ ಬೇರೊಂದಿಲ್ಲ ಇಲ್ಲಿರುವುದು ನಮ್ಮ ಭಾಗ್ಯ. ನಾವೆಲ್ಲರೂ ಭಾರತೀಯರಾಗಿ ಒಮ್ಮತದಿಂದ ಬಾಳುವಂತಾಗಬೇಕು" ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮಾಜಿ ಶಾಸಕ ಮೊಯಿದೀನ್ ಬಾವಾ, ಇಸ್ಮಾಯಿಲ್ ಮಾಸ್ಟರ್, ಜಮಾತ್ ಅಧ್ಯಕ್ಷ ಮಮ್ತಾಜ್ ಆಲಿ, ಬಿಕೆ ಹಿದಾಯತ್, ಇ.ಕೆ ಇಬ್ರಾಹಿಂ ಮುಸ್ಲಿಯಾರ್, ಕೃಷ್ಣಾಪುರ ಖಾಝಿ ಇಬ್ರಾಹಿಮ್ ಮುಸ್ಲಿಯಾರ್, ಪೆರುವಾಯಿ ತಂಙಳ್, ಅಬೂಸುಫ್ಯಾನ್ ಮದನೀ, ಅಲ್ ಮದೀನ ಖಾದರ್ ಸಖಾಫಿ, ಸುಲ್ತಾನ್ ಗೋಲ್ಡ್ ಮಾಲಕ ಅಬ್ದುಲ್ ರವೂಫ್, ಸುಫ್ಯಾನ್ ಸಖಾಫಿ, ಕೃಷ್ಣಾಪುರ ಕೇಂದ್ರ ಖತೀಬ್ ಫಾರೂಖ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್, ಅಬ್ದುಲ್ ಸತ್ತಾರ್, ಮಾಜಿ ಕಾರ್ಪೊರೇಟರ್ ಅಯಾಝ್, ಹಕೀಂ ಫಾಲ್ಕಾನ್ ಹಮೀದ್, ರಫೀಖ್ ಮಾಸ್ಟರ್, ಅಶ್ರಫ್ ಅಲ್ ಬದ್ರಿಯ, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/11/2021 06:48 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ