ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಂಚಾಡಿ: ಉತ್ತಮ ಶಿಕ್ಷಣ ಪಡೆದು ಮಾದರಿಯಾಗಿ: ಡಾ. ಭರತ್ ಶೆಟ್ಟಿ

ಮಂಗಳೂರು: ನಗರದ ವರವಲಯದ ಕೊಂಚಾಡಿ ಶ್ರೀ ರಾಮಾಶ್ರಮ ಶಾಲೆಯಲ್ಲಿ ಎಂ ಅರ ಪಿ ಎಲ್ ಸಂಸ್ಥೆ‌ ಸಾಮಾಜಿಕ ಬದ್ಧತಾ ನಿಧಿಯಡಿ ಕೊಡುಗೆಯಾಗಿ ನೀಡಿದ ಪೀಠೋಪಕರಣ ಹಾಗೂ ವಿಜ್ಞಾನ ಪ್ರಯೋಗಾಲಯ ಸಾಮಗ್ರಿಗಳ ಉದ್ಘಾಟನೆಯನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ನೆರವೇರಿಸಿ ಮಾತನಾಡಿ ಮಕ್ಕಳ ಕಲಿಕೆಗೆ ಅನೇಕ ಸವಲತ್ತುಗಳು ದಾನಿಗಳ ಮೂಲಕ ಒದಗಿಸುತ್ತಿದ್ದು ಉತ್ತಮ ಶಿಕ್ಷಣ ಪಡೆದು ಮಾದರಿಯಾಗಿ ಎಂದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಗಳಾದ ರಂಜಿನಿ ಕೋಟ್ಯಾನ್, ಜಯಾನಂದ ಅಂಚನ್‌, ಕೊಂಚಾಡಿ ಎಜುಕೇಶನಲ್ ಟ್ರಸ್ಟ್ ಬೋರ್ಡ್‌ ನ ಅಧ್ಯಕ್ಷರಾದ ಡಾ. ಸುಕುಮಾರ್ ದಂಡಕೇರಿ, ಶಾಲಾ ಸಂಚಾಲಕರಾದ ಡಾ. ಎನ್.ವಿ.ಕಿಶೋರ್ ಕುಮಾರ್, ಎಂ ಆರ್ ಪಿ ಎಲ್ ನ ಜನರಲ್ ಮ್ಯಾನೇಜರ್ ಹಾಗೂ ಆಡಳಿತಾಧಿಕಾರಿಗಳಾದ ಸುಬ್ರಾಯ ಭಟ್‌, ಪ್ರಮುಖರಾದ ಸೇವಂತಿ ಶ್ರೀಯಾನ್, ರಾಮಾಶ್ರಮ ಸಂಸ್ಥೆಗಳ ಶೋಶಾಧಿಕಾರಿಗಳಾದ ಲೋಕೇಶ್, ರಾಮಾಶ್ರಮ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಮಂಜಪ್ಪ, ರಾಮಾಶ್ರಮ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಪವಿತ್ರ, ಶಾಲೆಯ ಹಿತೈಷಿಗಳಾದ ಸದಾನಂದ ಪ್ರಭು ಹಾಗೂ ಹರಿಪ್ರಸಾದ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/09/2022 11:51 am

Cinque Terre

612

Cinque Terre

0

ಸಂಬಂಧಿತ ಸುದ್ದಿ