ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ವಿದ್ಯಾರ್ಥಿಮಂತ್ರಿಮಂಡಲವು ನಾಯಕತ್ವಗುಣಗಳನ್ನು ಜಾಗೃತಗೊಳಿಸುತ್ತದೆ"

ಮುಲ್ಕಿ: ವಿದ್ಯಾರ್ಥಿ ಮಂತ್ರಿಮಂಡಲವು ಒಂದು ಮಾದರಿಸಂಸತ್ತಾಗಿದ್ದು ವಿದ್ಯಾರ್ಥಿಗಳಲ್ಲಿ ಹುದುಗಿರುವ ನಾಯಕತ್ವಗುಣಗಳನ್ನು ಜಾಗೃತಗೊಳಿಸುತ್ತದೆ ತಾನು ಬೆಳೆಯುವುದರೊಂದಿಗೆ ಎಲ್ಲರನ್ನು ಸಮಾನವಾಗಿ ಬೆಳೆಸುವ ವ್ಯಕ್ತಿತ್ವ ಅದು ನಿಜವಾದ ನಾಯಕತ್ವ ಎಂದು ಬೆಥನಿ ಪ್ರೌಢಶಾಲೆಯ ರಕ್ಷಕಶಿಕ್ಷಕ ಸಂಘದ ಉಪಾಧ್ಯಕ್ಷರು ಹಾಗೂ ಮಂಗಳೂರು ಎಪಿಎಂಸಿ ಮಾರುಕಟ್ಟೆಯ ಮಾಜಿ ಉಪಾಧ್ಯಕ್ಷರಾದ ಜೋಯಲ್ ಹೆರಾಲ್ಡ್ ಡಿಸೋಜಾ ಹೇಳಿದರು.

ಅವರು ಮುಲ್ಕಿ ಮೆಡಲಿನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಂತ್ರಿಮಂಡಲ ಉದ್ಘಾಟಿಸಿ , ಪ್ರಮಾಣವಚನಬೋಧಿಸಿ ಮಾತನಾಡಿದರು.

ಕಿಲ್ಪಾಡಿ ಬೆಥನಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಭಗಿನಿ ವೀಣಾ ಡಿಸೋಜಾ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಭಗಿನಿ ಮಾರಿಯೊಲ ವಿದ್ಯಾರ್ಥಿ ಮಂತ್ರಿಮಂಡಲದ ಜವಾಬ್ದಾರಿಗಳನ್ನುವಿವರಿಸಿ ಶುಭಹಾರೈಸಿದರು.

ಉಪನ್ಯಾಸಕರಾದ ವಿಶಾಂತ್ ಶೆಟ್ಟಿ ,ಜ್ಯೋತ್ನಾ , ವಿಜೇತಾ ಮೊದಲಾದವರು ಉಪಸ್ಥಿತರಿದ್ದರು. ವಾಣಿಶ್ರೀ ಕಾರ್ಯಕ್ರಮನಿರೂಪಿಸಿದರು. ಅನುಷಾ ವಂದಿಸಿದರು.

Edited By : PublicNext Desk
Kshetra Samachara

Kshetra Samachara

26/06/2022 06:59 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ