ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಕ್ಕಳ ಶಿಕ್ಷಣಕ್ಕೆ ಪೋಷಕರ ಹಾಗೂ ಶಿಕ್ಷಕರ ಪ್ರೋತ್ಸಾಹ ಶ್ಲಾಘನೀಯ

ಮುಲ್ಕಿ: ಸೋಶಿಯಲ್ ಡೆಮಾಕ್ರ ಟಿಕ್ ಪಾರ್ಟಿ ಆಫ್ ಇಂಡಿಯಾ ಮುಲ್ಕಿ ಬ್ಲಾಕ್ ಸಮಿತಿ ವತಿಯಿಂದ ಮುಲ್ಕಿ ನಗರ ಪಂಚಾಯತ್ ವಲಯದ ಶಾಲೆಯ 2021 22 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಮುಲ್ಕಿಯ ಹೋಟೆಲ್ ಆದಿಧನ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಮುಲ್ಕಿ ವಲಯದ ಅಧ್ಯಕ್ಷ ಹಾಜಿ ಇಬ್ರಾಹಿಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವುಮೆನ್ಸ್ ಇಂಡಿಯಾ ಮೂಮೆಂಟ್ ನ ರಾಷ್ಟ್ರೀಯ ಕಾರ್ಯದರ್ಶಿ ಆಯೇಶಾ ಬಜ್ಪೆ ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಪೋಷಕರ ಹಾಗೂ ಶಿಕ್ಷಕರ ಪ್ರೋತ್ಸಾಹ ಶ್ಲಾಘನೀಯ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಸಂಘಟನೆಯ ಕ್ರಿಯಾಶೀಲ ಕಾರ್ಯವೈಖರಿ ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ಮಿಸ್ರಿಯಾ ಕಣ್ಣೂರು, ಎಸ್ಡಿಪಿಐ ಮೂಡಬಿದ್ರೆಯ ವಲಯ ಉಪಾಧ್ಯಕ್ಷ ನಿಸಾರ್ ಮರವೂರು, ಎಸ್ಡಿಪಿಐ ಮೂಲ್ಕಿ ಬ್ಲಾಕ್ ನ ಕಾರ್ಯದರ್ಶಿ ಸಾಧಿಕ್ ಯು.ಕೆ.ಉಪಸ್ಥಿತರಿದ್ದರು. ಮೆಹರೂಫ್ ನಿರೂಪಿಸಿದರು. ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಸುಮಾರು 11 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

05/06/2022 06:25 pm

Cinque Terre

3.4 K

Cinque Terre

1

ಸಂಬಂಧಿತ ಸುದ್ದಿ