ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಡಪ್ಪಾಡಿ,ಕೊಂಬಾರು ಶಾಲಾ ಮಕ್ಕಳಿಗೆ ವಿತರಿಸಲು ಪುಸ್ತಕ ಹಸ್ತಾಂತರ

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಸರ್ಕಾರಿ ಶಾಲೆಯ ಮತ್ತು ಕಡಬ ತಾಲೂಕಿನ ಕೊಂಬಾರು ಸರಕಾರಿ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ತನ್ನ ಸಿಎಸ್‍ಆರ್ ಯೋಜನೆಯಡಿ ನೋಟ್ ಪುಸ್ತಕಗಳನ್ನು ಒದಗಿಸಲಾಗಿದೆ. ಶಾಲಾ ಮಕ್ಕಳಿಗೆ ವಿತರಿಸಲು ನೋಟ್ ಪುಸ್ತಕಗಳನ್ನು ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಕೆಐಒಸಿಎಲ್ ಸಂಸ್ಥೆ ಸಿಎಸ್‍ಆರ್ ಯೋಜನೆಯಡಿ ಒಂದು ಲಕ್ಷ ರೂ ನೀಡಿದ್ದು ಸುಮಾರು 50 ಸಾವಿರ ರೂ ಮೊತ್ತದಲ್ಲಿ ಪುಸ್ತಕ ಖರೀದಿಸಲಾಗಿದೆ. ಕೊಂಬಾರು ಸರಕಾರಿ ಶಾಲೆಯ 134 ಹಾಗೂ ಮಡಪ್ಪಾಡಿ ಸರಕಾರಿ ಶಾಲೆಯ 62 ಮಕ್ಕಳಿಗೆ ಒಟ್ಟು 196 ಮಕ್ಕಳಿಗೆ ಮುಂದಿನ ವಾರ ಈ ಪುಸ್ತಕಗಳನ್ನು ಹಸ್ತಾಂತರ ಮಾಡಲಾಗುವುದು. ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ. ಕೆಐಒಸಿಎಲ್ ಎಂಡಿ ಸಾಮಿನಾಥನ್ ಪುಸ್ತಕವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ರವರಿಗೆ ಹಸ್ತಾಂತರಿಸಿದರು.

ಮಂಗಳೂರು ನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್,ಕೆಐಒಸಿಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸ್ವಾಮಿನಾಥನ್, ಕೆಐಒಸಿಎಲ್ ನಿರ್ದೇಶಕ (ಹಣಕಾಸು) ಸ್ವಪನ್ ಕುಮಾರ್ ಗೊರೈ, ನಿರ್ದೇಶಕ (ಉತ್ಪಾದನೆ ಮತ್ತು ಯೋಜನೆ) ಕೆ.ವಿ.ಭಾಸ್ಕರ ರೆಡ್ಡಿ, ಮಹಾಪ್ರಬಂಧಕ (ಉತ್ಪಾದನೆ) ರಾಮಕೃಷ್ಣ ರಾವ್, ಪ್ರೆಸ್‍ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು,ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

27/10/2021 04:50 pm

Cinque Terre

320

Cinque Terre

0

ಸಂಬಂಧಿತ ಸುದ್ದಿ