ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಸ್ವಚ್ಛತೆ ಮೂಲಕ ಆರೋಗ್ಯಕ್ಕೆ ಪ್ರಾಮುಖ್ಯತೆ ಅಭಿನಂದನೀಯ; ಉಮಾನಾಥ ಕೋಟ್ಯಾನ್

ಕಟೀಲು: ಆರೋಗ್ಯ ಶಿಬಿರದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಕಾರ್ಯ ಅಭಿನಂದನೀಯ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬಿದಿಯಲ್ಲಿ ಭಾರತೀಯ ಜನಾತಾ‌ಪಾರ್ಟಿ ಮೂಲ್ಕಿ ಮೂಡಬಿದ್ರೆ ಮಂಡಲ ವತಿಯಿಂದ ನರೇಂದ್ರ‌ಮೋದಿಯವರ ಸೇವಾ ಪಾಕ್ಷಿಕದ ಅಂಗವಾಗಿ ಕಟೀಲು ದುರ್ಗಾ ಸಂಜೀವಿನಿ ಅಸ್ಪತ್ರೆಯ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.

ಕಟೀಲು ದೇಗುಲದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಆಶೀರ್ವಾಚನ ನೀಡಿದರು. ಈ ಸಂದರ್ಭ ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಖಾಲ್ದಿ ಬಿಜೆಪಿ ಮಂಡಾಲಾಧ್ಯಕ್ಷ ಸುನೀಲ್ ಅಳ್ವ, ಧಾರ್ಮಿಕ ಪರಿಷ್ಯತ್ ಸದಸ್ಯ ಭುವನಾಭಿರಾಮ ಉಡುಪ, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲು, ಕಸ್ತೂರಿ ಪಂಜ, ಜನಾರ್ದನ ಕಿಲೆಂಜೂರು, ಅಭಿಲಾಷ್ ಶೆಟ್ಟಿ ಕಟೀಲು ದುರ್ಗಾ ಸಂಜೀವಿನಿ ಅಸ್ಪತ್ರೆಯ ಸುದೀಂದ್ರ ಕಾರ್ನಾಡ್, ನಿತ್ಯಾನಂದ ಚೌಟ ಮತ್ತಿತರರು ಉಪಸ್ಥಿತರಿದ್ದರು ಜನಾರ್ದನ ಕಿಲೆಂಜೂರು ಸ್ವಾಗತಿಸಿ, ಕೇಶವ ಕರ್ಕೇರ ನಿರೂಪಿಸಿದರು

Edited By : PublicNext Desk
Kshetra Samachara

Kshetra Samachara

29/09/2022 01:06 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ