ಮುಲ್ಕಿ: ಇತಿಹಾಸ ಪ್ರಸಿದ್ಧ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಾಳೆ (ಸೆ. 1 ಗುರುವಾರ) ನಡೆಯಲಿರುವ ಅನುಜ್ಞಾನ ಕಲಶ, ಲಕ್ಷ ಬಿಲ್ವಾರ್ಚನೆ ಹಾಗೂ 1008 ಮೋದಕ ಹೋಮದ ಪೂರ್ವಭಾವಿ ಸಿದ್ಧತೆ ಭರದಿಂದ ನಡೆದಿದೆ.
ದೇವಸ್ಥಾನದಲ್ಲಿ ನಾಳಿನ ಕಾರ್ಯಕ್ರಮಕ್ಕೆ ಬಿಲ್ವಪತ್ರಗಳನ್ನು ಜೋಡಿಸುವ ಕಾರ್ಯ ಸ್ವಯಂಸೇವಕರಿಂದ ಹಾಗೂ ವಿವಿಧ ಸಂಘಟನೆಗಳಿಂದ ನಡೆಯುತ್ತಿದೆ.
ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ 7 ಗಂಟೆಗೆ ಪಡುಪಣಂಬೂರಿನ ಮುಲ್ಕಿ ಸೀಮೆಯ ಅರಮನೆಯಿಂದ ಭವ್ಯವಾದ ಮೆರವಣಿಗೆಯಲ್ಲಿ ಬಿಲ್ವಪತ್ರೆಗಳನ್ನು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನಕ್ಕೆ ತಂದು ಶ್ರೀ ದೇವರಿಗೆ ಸಮರ್ಪಿಸಲಾಗುವುದು.
ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
Kshetra Samachara
31/08/2022 06:32 pm