ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ಮೇಳದ ಕಲಾವಿದರಿಗೆ ಮಳೆಗಾಲದ ಪ್ರೋತ್ಸಾಹಕ ಧನ ರೂ, 40 ಲಕ್ಷ ವಿತರಣೆ

ಕಟೀಲು: ಕಟೀಲು ಮೇಳದ ಸುಮಾರು ಮುನ್ನೂರ ಇಪ್ಪತ್ತರಷ್ಟು ಕಲಾವಿದರಿಗೆ ಕಟೀಲಿನಲ್ಲಿ ನಡೆದ ಅಷ್ಟಮಿ ಆಟದ ಸಂದರ್ಭ ಮಳೆಗಾಲದ ಪ್ರೋತ್ಸಾಹಕ ಧನ ರೂ. 40 ಲಕ್ಷವನ್ನು ವಿತರಿಸಲಾಯಿತು.

ಕಟೀಲು ಮೇಳದ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾಹಿತಿ ನೀಡಿ ಮಳೆಗಾಲದ ಪ್ರೋತ್ಸಾಹಕ ಧನವನ್ನು ನೀಡಲು ಆರಂಭಿಸಿದ ಮೊದಲ ಮೇಳ ಕಟೀಲು ಆಗಿದ್ದು, ಕೊರೊನಾ ಸಂದರ್ಭದ ಎರಡು ವರುಷಗಳಲ್ಲಿ ಈ ಮೊತ್ತವನ್ನು ನೀಡಲಾಗಿಲ್ಲ. ಆದರೆ ಈ ಬಾರಿ ಮೇಳದಿಂದ ಈ ಮೊತ್ತ ನೀಡಲು ಪುನರಾಂಭಿಸಿರುವುದು ಅಭಿನಂದನೀಯ ಎಂದರು.

ಕಟೀಲು ಮೇಳದ ಕಲಾವಿದ ಇತ್ತೀಚಿಗೆ ಅಸಹಜ ಸಾವನ್ನಪ್ಪಿದ ಶಂಭುಕುಮಾರ ಇವರ ಕುಟುಂಬಕ್ಕೆ ಅಷ್ಟಮಿ ಆಟದ ಸಂದರ್ಭ ರೂ. ಒಂದು ಲಕ್ಷ ವನ್ನು ಕಟೀಲು ಮೇಳದ ವತಿಯಿಂದ ನೀಡಲಾಯಿತು.

ದೇಗುಲದ ಆಡಳಿತ ಸಮಿತಿಯ ಸನತ್ ಕುಮಾರ ಶೆಟ್ಟಿ, ವಾಸುದೇವ ಆಸ್ರಣ್ಣ ಹಾಗೂ ಆಸ್ರಣ್ಣ ಬಂಧುಗಳು, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮೇಳದ ಕಲಾವಿದರ ಉಪಸ್ಥಿತಿಯಲ್ಲಿ ಶಂಭು ಕುಮಾರ ಅವರ ಸಹೋದರ ಕಲಾವಿದ ಗಣೇಶ ಚಂದ್ರಮಂಡಲ ಅವರಿಗೆ ನಿಧಿಯನ್ನು ಹಸ್ತಾಂತರಿಸಲಾಯಿತು.

Edited By : PublicNext Desk
Kshetra Samachara

Kshetra Samachara

20/08/2022 03:21 pm

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ