ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಮಹಿಳೆಯರು ಸ್ವಉದ್ಯೋಗದಲ್ಲಿ ಮುಂದೆ ಬಂದರೆ ಗ್ರಾಮದ ಅಭಿವೃದ್ಧಿ ಸಾಧ್ಯ

ಮುಲ್ಕಿ:ಲಯನ್ಸ್ ಕ್ಲಬ್ ಬಪ್ಪನಾಡು, ಇಸ್ಪೈರ್ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ, ಲಯನ್ಸ್ ಕ್ಲಬ್ ನೇತ್ರಾವತಿ ,ಪ್ರಜ್ಞಾ ಸಲಹಾ ಕೇಂದ್ರ ಸಹಯೋಗದೊಂದಿಗೆ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಿಗೆ ಹಪ್ಪಳ ಸೆಂಡಿಗೆ ಫಿನೈಲ್ ಸೋಪ್ ವಾಟರ್ ಮುಂತಾದ ಸ್ವಉದ್ಯೋಗ ತರಬೇತಿ ಕಾರ್ಯಕ್ರಮ ಮುಲ್ಕಿಯ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 48 ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿಯನ್ನು ಪಡೆದರು ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೆರ್ ನ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾತನಾಡಿ ಮಹಿಳೆಯರು ಸ್ವಉದ್ಯೋಗದಲ್ಲಿ ಮುಂದೆ ಬಂದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರತಿಭಾ ಹೆಬ್ಬಾರ್ , ಸುಧೀರ್ ಬಾಳಿಗಾ ಚಂದ್ರಶೇಖರ, ಮುಚ್ಚೂರು ನೀರುಡೆ ಅಧ್ಯಕ್ಷ ಸ್ಟ್ಯಾನಿ ಮಿರಾಂಡಾ, ಉಪಾಧ್ಯಕ್ಷ ರೋಷನ್ ಡಿಸೋಜ ಸದಸ್ಯರಾದ ಅಶೋಕ್ ನಾಯಕ್ ನೇತ್ರಾವತಿ ಕ್ಲಬ್ಬಿನ ಅಧ್ಯಕ್ಷ ಆಶಾ ನಾಗರಾಜ್, ಜ್ಯೋತಿ ಎಸ್. ಅಂಚನ್, ಮುಖ್ಯ ತರಬೇತುದಾರರಾದ ಹರಿಣ ರಾವ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/08/2022 02:32 pm

Cinque Terre

748

Cinque Terre

0

ಸಂಬಂಧಿತ ಸುದ್ದಿ