ಮುಲ್ಕಿ:ಭಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಮಹಾ ಶಕ್ತಿ ಕೇಂದ್ರದ ನೇತ್ರತ್ವದಲ್ಲಿ, ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಮಂಡಲ ಅಧ್ಯಕ್ಷ ಸುನಿಲ್ ಆಳ್ವ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಮಂಡಲ ಪ್ರಧಾನ ಕಾರ್ಯದರ್ಶಿಯಾದ ಕೇಶವ್ ಕರ್ಕೇರ, ಅಭಿಲಾಷ್ ಶೆಟ್ಟಿ ಕಟೀಲು, ಮಾಜಿ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್ ಉಪಸ್ಥಿತರಿದ್ದರು.
ಯೋಗ ಗುರುಗಳಾದ ದಾಮೋದರ್ ಮೂಡಬಿದ್ರೆ ಇವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸವನ್ನು ಮಾಡಲಾಯಿತು. ಪಕ್ಷದ ಪ್ರಮುಖರಾದ ರಘುವೀರ್ ಕಾಮತ್, ಸಚಿನ್ ಶೆಟ್ಟಿಗಾರ್, ಗಣನಾಥ್ ಮಲ್ಯ, ಮಿಥುನ್ ಆಚಾರ್ಯ, ರಾಘವ ಶೆಟ್ಟಿಗಾರ್, ಹರಿಪ್ರಸಾದ್ ಆಚಾರ್ಯ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
Kshetra Samachara
21/06/2022 12:07 pm