ಕಟೀಲು :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ 44 ಜೋಡಿಗಳಿಗೆ ಸರಳ ವಿವಾಹ ನಡೆಯಿತು. ಮೇ ತಿಂಗಳಲ್ಲಿ ದೇಗುಲದಲ್ಲಿ ಒಟ್ಟು 210 ವಿವಾಹಗಳು ನಡೆದಿದ್ದು ತಾ. 25ರಂದು 21 ಮದುವೆಗಳು ನಡೆಯಲಿವೆ. ಕೇವಲ ರೂ. 801ಗಳಲ್ಲಿ ದೇವರ ಎದುರು ವಿವಾಹ ಆಗುವ ಅವಕಾಶ ಇದ್ದು ವಿವಾಹ ನೋಂದಣೆಯ ದಾಖಲೆ ಪತ್ರವನ್ನೂ ನೀಡಲಾಗುತ್ತದೆ.
ಅನೇಕರು ಕಟೀಲಿನಲ್ಲೇ ವಿವಾಹವಾಗುವುದಾಗಿ ಹರಕೆ ಹೊರುತ್ತಾರೆ. ಆರ್ಥಿಕವಾಗಿ ಕಷ್ಟದಲ್ಲಿರುವವರು ಮಾತ್ರವಲ್ಲದೆ ಉದ್ಯಮಿಗಳು ಪ್ರತಿಷ್ಟಿತರೂ ಕೂಡ ದೇವರ ಎದುರು ಸರಳ ವಿವಾಹವಾಗುತ್ತಾರೆ.
Kshetra Samachara
22/05/2022 02:35 pm