ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:"ಯವ ಭಾಗವತ ಬಲಿಪ ಪ್ರಸಾದ್ ಭಟ್ ಅಕಾಲಿಕ ನಿಧನ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ನಷ್ಟ"

ಮುಲ್ಕಿ: ಯಕ್ಷಗಾನ ರಂಗ ಭೂಮಿಯಲ್ಲಿ ಅನರ್ಘ್ಯ ರತ್ನ ದಂತಿದ್ದ ಪಂರಂಪರೆಯ ಚೌಟಕ್ಕನ್ನು ಮೀರದ ಶಿಸ್ತು ಬಧ್ದ ಕಲಾವಿದ ಯಕ್ಷಗಾನ ರಂಗ ಕಂಡ ಯವ ಭಾಗವತ ಬಲಿಪ ಪ್ರಸಾದ್ ಭಟ್ ರವರ ಅಕಾಲಿಕ ನಿಧನ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಕಟೀಲು ಮೇಳದ ಹಿರಿಯ ಯಕ್ಷಗಾನ ಕಲಾವಿದ ಗಣೇಶ್ ಚಂದ್ರಮಂಡಲ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ ಹಾಗೂ ಯುಗಪುರುದ ಸಂಯುಕ್ತ ಆಶ್ರಯದಲ್ಲಿ ನಿಧನ ಹೊಂದಿದ ಯಕ್ಷಗಾನ ಭಾಗವತ ಬಲಿಪ ಪ್ರಸಾದ್ ಭಟ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಮುಗ್ದ ಮನಸ್ಸಿನ ಪ್ರಸಾದ್ ಭಾಗವತರು ಚಿಕ್ಕ ಮಕ್ಕಳ ಜೊತೆಗೂ ಹಾಗೂ ಹಿರಿಯ ಕಲಾವಿದರ ಜೊತೆಗೂ ಉತ್ತಮ ಓಡನಾಟ ಬೆಳಸಿಕೊಂಡಿದ್ದು ರಂಗದಲ್ಲಿ ಉತ್ತಮ ರಂಗ ನಡೆ ಕಲಾವಿದರು ಬೆಳೆಯಬೇಕು ಎಂದು ಹಂಬಲ ತುಡಿತ ಅವರಲ್ಲಿ ಇತ್ತು ಅವರ ನಿಧನ ರಂಗಕ್ಕೆ ದೊಡ್ಡ ನಷ್ಟ ಎಂದರು

ಯಕ್ಷಗುರು ಶೇಖರ್ ಶೆಟ್ಟಿಗಾರ್ ಮಾತನಾಡಿ ಸೌಜನ್ಯ ಹಾಗೂ ಸ್ವಾರ್ಥ ಭಾವನೆ ಇಲ್ಲದ ಸಂಭಾವನೆಯ ಗೋಜಿಗೂ ಹೋಗದ ಒರ್ವ ಅಪ್ಪಟ ಯಕ್ಷಗಾನ ರಂಗದ ಮಹಾನ್ ಕಲಾವಿದ ಪ್ರಾಯದಲ್ಲಿ ಚಿಕ್ಕವರಾಗಿದ್ದರು ರಂಗದಲ್ಲಿ ಹಿರಿಯರನ್ನು ಮೀರಿ ಮೆಟ್ಟಿನಿಲ್ಲಬಲ್ಲ ಸಾಮಥ್ಯದ ಕಲಾವಿದರಾಗಿದ್ದರು. ಯಕ್ಷ ರಂಗಕ್ಕೆ ಇನ್ನೂ ಅಗತ್ಯಇತ್ತು ಎಂದರು.

ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ , ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸ್ವರಾಜ್ ಶೆಟ್ಟಿ , ಯಕ್ಷಲಹರಿಯ ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗ ಪ್ರಸಾದ್ ಬಲಿಪದ ಬಗ್ಗೆ ಮಾತನಾಡಿದರು. ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ , ನಿವೃತ್ತ ಉಪ ತಹಶೀಲ್ದಾರ ಯೋಗೀಶ್ ರಾವ್ ಏಳಿಂಜೆ , ಉದ್ಯಮಿ ಪ್ರಥ್ವಿ ರಾಜ ಆಚಾರ್ಯ ಕಿನ್ನಿಗೋಳಿ, ರಾಮಣ್ಣ ಕುಲಾಲ್ , ಲಕ್ಷಣ್ ಸಾಲ್ಯಾನ್ ಕೆರೆಕಾಡು , ಶರತ್ ಶೆಟ್ಟಿ , ರಘುನಾಥ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/04/2022 06:44 pm

Cinque Terre

1.09 K

Cinque Terre

0

ಸಂಬಂಧಿತ ಸುದ್ದಿ