ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು: 'ದೈವಸ್ಥಾನಗಳು ಗ್ರಾಮದ ಭಕ್ತಿಯ ಪ್ರತೀಕ'

ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ಕೋಟೆಬಬ್ಬು ದೈವಸ್ಥಾನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ರವರ ಸುಮಾರು ಐದು ಲಕ್ಷದ ವೆಚ್ಚದ ಅನುದಾನದಲ್ಲಿ ನಿರ್ಮಾಣವಾದ ಆವರಣ ಗೋಡೆಯ ಲೋಕಾರ್ಪಣೆ ಸಮಾರಂಭ ದೈವಸ್ಥಾನದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟೇಲ್ ವಾಸುದೇವರಾವ್ ವಹಿಸಿ ಮಾತನಾಡಿ, ದೈವಸ್ಥಾನಗಳು ಗ್ರಾಮದ ಭಕ್ತಿಯ ಪ್ರತೀಕವಾಗಿದ್ದು ಸಾನಿಧ್ಯ ಮತ್ತಷ್ಟು ಬೆಳಗುವ ಮೂಲಕ ಅಭಿವೃದ್ಧಿ ಹೊಂದಲಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ನಾಯಕ ಮಿಥುನ್ ರೈ, ಕಿಲ್ಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರುಗಳಾದ ದಮಯಂತಿ ಶೆಟ್ಟಿಗಾರ್, ದಿನೇಶ ಆಚಾರ್ಯ, ಬೆಂಗಳೂರು ಸತ್ಯವಾಣಿ ಸಮೂಹ ಸಂಸ್ಥೆಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಅಜಿತ್ ಕೆರೆಕಾಡು, ಯುವ ಬಳಗ ದ ಸತೀಶ್ ಕೆರೆಕಾಡು, ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಲಿತಾ ಭಾಸ್ಕರ್, ಕೆರೆಕಾಡು ಕಟ್ಟೆ ಪೂಜೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಂದೀಪ್ ಕುಮಾರ್, ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ದೈವಸ್ಥಾನದ ಗುರಿಕಾರ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/04/2022 06:50 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ