ಮುಲ್ಕಿ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ಸಂಸ್ಕಾರ ಕೊಡುವ ಕೆಲಸ ನಮ್ಮಿಂದ ಆಗಬೇಕು ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.
ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ವಾರ್ಷಿಕ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಕುಂಜಿರಾಯರ ಸನ್ನಿಧಿಗೆ ಬೇರೆ ಬೇರೆ ಕಡೆಗಳಿಂದ ದೈವದ ಭಂಡಾರ ಆಗಮಿಸಿ ಇಲ್ಲಿ ನೇಮ ನಡೆಯುತ್ತದೆ ಇದು ನಮ್ಮ ಹಿರಿಯರು ಮಾಡಿದ ಸಂಪ್ರದಾಯವಾಗಿದ್ದು ಇದರಿಂದ ಬೇರೆ ಬೇರೆ ಕಡೆಗಳ ಜನರ ಬಾಂಧವ್ಯ ವೃದ್ದಿಯಾಗುತ್ತದೆ ಎಂದರು.
ಮುಂಡ್ಕೂರು ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನದ ಗೌರವಾಧ್ಯಕ್ಷ ಎಂ. ಜಿ. ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ದ. ಕ. ಜಿಲ್ಲಾ ರಾಜೋತ್ಸವ ಪುರಸ್ಕೃತ ಶಿವರಾಮ ಸೇರಿಗಾರ , ಯುವ ಪತ್ರಕರ್ತ ನಿಶಾಂತ್ ಶೆಟ್ಟಿ ಕಿಲೆಂಜೂರು ರನ್ನು ಸನ್ಮಾನಿಸಲಾಯಿತು,
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಮಕ್ಕಳಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.
ಜಾಗತಿಕ ಬಂಟರ ಸಂಘದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಮಂಗಳೂರು ಯಮುನಾ ಬಿಲ್ದರ್ ಪುರುಷೋತ್ತಮ ಶೆಟ್ಟಿ , ಪಕ್ಷಿಕೆರೆ ಉದ್ಯಮಿ ಸಂತೋಷ್ ಶೆಟ್ಟಿ , ಅತ್ತೂರು ಕೊಜಪಾಡಿ ಬಾಳಿಕೆ ಮನೋಜ್ ಎಸ್ ಆಳ್ವ, ಹರೀಶ್‌ಟಿ. ಶೆಟ್ಟಿ ಅತ್ತೂರು ಭಂಡಾರ ಮನೆ, ಜಯಂತಿ ಶೆಟ್ಟಿ ಭಂಡಾರಮನೆ ಮತ್ತಿತರರು ಉಪಸ್ಥಿತರಿದ್ದರು.
ಅರಸುಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಶೆಟ್ಟಿ ಪ್ರಸ್ತಾವನೆಗೈದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
29/03/2022 05:02 pm