ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಭೋಜನ ಶಾಲೆಗೆ ಬ್ಯಾಂಕ್ ಆಫ್ ಬರೋಡ ಸಂಸ್ಥೆಯ ವತಿಯಂದ ನೂತನ ಕೊಡುಗೆಯಾಗಿ ನೀಡಿದ ಡಿಶ್ ವಾಷರ್ ಸಮರ್ಪಣೆ ಕಟೀಲು ಅನ್ನ ಪೂರ್ಣ ಭೋಜನ ಶಾಲೆಯಲ್ಲಿ ನಡೆಯಿತು.
ಬ್ಯಾಂಕ್ ಆಫ್ ಬರೋಡದ ಮಂಗಳೂರು ವಲಯದ ಮಹಾ ಪ್ರಬಂಧಕಿ ಗಾಯತ್ರಿ ಆರ್ ರವರು ಕಟೀಲು ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ವೆ. ಮೂ. ವಾಸುದೇವ ಆಸ್ರಣ್ಣ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಅವರಿಗೆ ಹಸ್ತಾಂತರಿಸಿದರು.
ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿ,ಪ್ರಸ್ತಾವನೆಗೈದರು. ಉಪ ಮಹಾಪ್ರಬಂಧಕ ಗೋಪಾಲಕೃಷ್ಣ ಆರ್, ಸಹಾಯಕ ಉಪ ಮಹಾ ಪ್ರಬಂಧಕ ಸಂಜಯ್ ಎಸ್ ವಾಲ್ , ಕಟೀಲು ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ಮಹೇಶ್ ಭಟ್ ಎನ್, ದೇವಸ್ಥಾನದ ಪ್ರಬಂಧಕ ತಾರಾನಾಥ ಶೆಟ್ಟಿ , ರಘುನಾಥ ಶೆಟ್ಟಿ , ಬ್ಯಾಂಕ್ ಮಾರುಟಕಟ್ಟೆ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
28/03/2022 04:49 pm