ಮುಲ್ಕಿ: ರಾಜ್ಯಮಟ್ಟದ ಕೃಷಿಮೇಳದ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡುವ ಮೂಲಕ ಕೃಷಿ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಕೆಮ್ರಾಲ್ ಗ್ರಾಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಹೇಳಿದರು
ಅವರು ಮುಲ್ಕಿ ಸಮೀಪದ ಕೊಲ್ನಾಡು ನಲ್ಲಿ ನಡೆಯಲಿರುವ ಬೃಹತ್ ಕೃಷಿಮೇಳದ ಕೃಷಿಸಿರಿ 2022ರ ಮಾಹಿತಿ ಕಾರ್ಯಾಲಯವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್, ಕೃಷಿಸಿರಿ 2022ರ ಅಧ್ಯಕ್ಷ ವಿಜಯ ಶೆಟ್ಟಿ, ಪದಾಧಿಕಾರಿಗಳಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಜೀವನ್ ಶೆಟ್ಟಿ ಕಾರ್ನಾಡ್, ಹರಿಪ್ರಸಾದ್, ಸಂತೋಷ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಶ್ರೀಧರ್ ಶೆಟ್ಟಿಗಾರ್, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೊಲ್ನಾಡು ನಿರೂಪಿಸಿದರು.
Kshetra Samachara
04/03/2022 02:17 pm