ಮಂಗಳೂರು:ಆಶ್ರಮದ ಮಕ್ಕಳೆಂದು ಯಾವುದೇ ತಾರತಮ್ಯ ಮಾಡದೇ ಮಕ್ಕಳು ಕೂಡಾ ಎಂದಿಗೂ ತಮ್ಮಬಗ್ಗೆ ನಿರಾಶ ಮನೋಭಾವ ಹೊಂದದೆ ತಮಗೂ ಉತ್ತಮ ಭವಿಷ್ಯ ಮುಂದೆ ಕಾದಿದೆ ಎಂಬ ಸಕಾರಾತ್ಮಕ ಚಿಂತನೆಯೊಂದಿಗೆ ಉತ್ತಮ ಶಿಕ್ಷಣ, ಗುಣ ನಡತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣರು ಆಶೀರ್ವಚನಗೈದರು.
ಅವರು ನಗರದ ನಂತೂರಿನಲ್ಲಿರುವ ಸಂವೇದನಾ ಆಶ್ರಮದಲ್ಲಿ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ನ್ನು ಲೋಕಾರ್ಪಣೆಗೊಳಿಸಿದರು.
ಗೋಪೂಜೆ, ತುಳಸಿ ಪೂಜೆಯಲ್ಲಿ ಪಾಲ್ಗೊಂಡು ಹಿತೋಕ್ತಿ ನೀಡುತ್ತಾ ದೀಪಾವಳಿ ಮನೆ ಮನಗಳನ್ನು ಬೆಳಗಿಸಿ ಅಂಧಕಾರ ನೀಗಿಸಿ ಜಗತ್ತಿಗೇ ಬೆಳಕನ್ನು ನೀಡುವ ಹಬ್ಬವಾಗಿದೆ. ಆಶ್ರಮದ ಮಕ್ಕಳ ಜ್ಞಾನ ವೃದ್ಧಿಯಾಗಿ ಅವರ ಬಾಳು ಬೆಳಗಲಿ ಎಂದು ಆಶೀರ್ವಚನ ನೀಡಿದರು.
ಮಹಾಪೌರ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಸಂವೇದನಾ ಆಶ್ರಮದ ಮಕ್ಕಳ ಹಿತ ಕಾಪಾಡಲು ಸೂಕ್ತವಾಗಿ ಸ್ಪಂದನೆ ಮಾಡುವುದಾಗಿ ಭರವಸೆ ನೀಡಿದರು. ಎ ಸಿ ಪಿ ಎಂ ಎ ನಟರಾಜ್ ಮಾತನಾಡಿ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣವಾದ ಸಂವೇದನಾ ಆಶ್ರಮದ ಕಾರ್ಯ ಬಹಳ ಶ್ಲಾಘನೀಯ. ತಾನೂ ಆಶ್ರಮಕ್ಕೆ ಸಹಕಾರ ನೀಡುವುದಾಗಿ ಭರವಸೆಯನ್ನಿತ್ತರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸ್ಥಳೀಯ ಮುಖಂಡ ಕಿರಣ್,ಲತಾ ಧರ್ಮೇಂದ್ರ, ನಿರಂಜನ್ ಹೊಳ್ಳ ಉಪಸ್ಥಿತರಿದ್ದರು. ಜಾನಕಿಸೇವಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಧರ್ಮೇಂದ್ರ ಗಣೇಶಪುರ ಪ್ರಸ್ತಾವಿಕ ಮಾತುಗಳನ್ನಾಡಿದರು. ಎನ್ ಎಂ ಪಿ ಟಿ ಮಾಜಿ ಟ್ರಸ್ಟಿ ಪಿ ಸುಧಾಕರ್ ಕಾಮತ್ ಸ್ವಾಗತಿಸಿದರು. ಹೊನ್ನಯ್ಯ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವಿಕಿರಣ್ ಗಣೇಶಪುರ ಅವರಿಂದ ದೀಪಾವಳಿ ಸಂಭ್ರಮ ಅಶು ಚಿತ್ರ ಗಾಯನ ಕಾರ್ಯಕ್ರಮ ನಡೆಯಿತು.
Kshetra Samachara
06/11/2021 04:06 pm