ಮೂಡಬಿದ್ರೆ:ಮೂಡುಬಿದಿರೆಯ ವಿದ್ಯಾಗಿರಿಯ ನುಡಿಸಿರಿ ವಿರಾಸತ್ ಸಭಾಂಗಣದಲ್ಲಿ 20ನೇ ರಾಜ್ಯಮಟ್ಟದ ವುಶು ಕ್ರೀಡಾಕೂಟವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಭಾರತ ಮೂಲದ ವುಶು ಕಲೆಯು ಇನ್ನಷ್ಟು ಜನ ಮನ್ನಣೆಯನ್ನು ಪಡೆದುಕೊಳ್ಳುವುದರ ಜತೆಗೆ ಆತ್ಮರಕ್ಷಣಾ ಕ್ರೀಡೆಗಳಲ್ಲಿ ಮೊದಲ ಆದ್ಯತೆಯನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ವುಶು ಸಂಸ್ಥೆಯ ದ.ಕ ಜಿಲ್ಲಾ ಗೌರವಾಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಶಾರದಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಬಿ ಪುರಾಣಿಕ್, ಉದ್ಯಮಿ ಅಶೋಕ್ ಕುಮಾರ್ ರೈ, ಸತ್ಯಜಿತ್ ಸುರತ್ಕಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ, ವುಶು ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಅಶೋಕ್ ಡಿ ಮೊಕಾಶಿ , ದ.ಕ ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯೆ ಸಂಧ್ಯಾ ವೆಂಕಟೇಶ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ,ಲೆಕ್ಕ ಪರಿಶೋಧಕ ಎಸ್.ಎಸ್ ನಾಯಕ್ ಉಪಸ್ಥಿತರಿದ್ದರು.
Kshetra Samachara
01/10/2021 09:03 pm