ಕುಡುಪು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಕುಡುಪು ಪರಿಸರದಲ್ಲಿ ಪರಿಶಿಷ್ಟ ಪಂಗಡದ ಸುಮಾರು 32 ಕುಟುಂಬಗಳು ಕಳೆದ 90 ವರ್ಷಗಳಿಂದ ವಾಸ ಮಾಡುತ್ತಿವೆ. ಅವರ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಈ ವಿಷಯ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಗಮನಕ್ಕೆ ತಂದಾಗ ಪರಿಶಿಷ್ಟ ಪಂಗಡದವರು ವಾಸಿಸುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಸೂಕ್ತವಾದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಅಲ್ಲಿನ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಶಾಸಕರೊಂದಿಗೆ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಆನಂದ ಪಾಂಗಳ, ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಕರಿಯ, ಲಕ್ಷ್ಮಣ ವಾಮಂಜೂರು
ಶೇಖರ್, ಭಾಸ್ಕರ್, ಲಿಂಗಯ್ಯ, ಪ್ರೇಮ, ಸುಶೀಲ, ಮಂಜುಳಾ, ಮತ್ತಿತ್ತರರು ಉಪಸ್ಥಿತರಿದ್ದರು.
Kshetra Samachara
24/08/2021 06:31 pm