ಮುಲ್ಕಿ: ಹಳೆಯಂಗಡಿ ಸಮೀಪದ 10ನೇ ತೋಕೂರು ಫೇಮಸ್ ಯೂತ್ ಕ್ಲಬ್ (ರಿ) ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮದಲ್ಲಿ ಚೇಳಾಯರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಜಯಾನಂದ ಸುವರ್ಣ ಮಾತನಾಡಿದರು. ಸಂಸ್ಥೆಯ ಪೋಷಕರಾದ ಟಿ.ಜಿ ಭಂಡಾರಿ ಮಾತನಾಡಿ ಸ್ವಾಮಿ ವಿವೇಕಾನಂದರ ಬದುಕಿನ ವಿಚಾರಧಾರೆಗಳನ್ನು ವಿವರಿಸುತ್ತಾ ಅವರ ತತ್ವ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಸಮನ್ವಯಾಧಿಕಾರಿ ರಘುವೀರ ಸೂಟರ್ ಪೇಟೆ, ತಾಲೂಕು ಪ್ರತಿನಿಧಿ ಪ್ರೀತೇಶ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ನ ಕೋಶಾಧಿಕಾರಿಯಾದ ಸತ್ತಾರ್ ಪುತ್ತೂರು, ಸಂಸ್ಥೆಯ ಗೌರವಾಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್, ಕಾರ್ಯದರ್ಶಿ ಹಿಮಕರ ಕೋಶಾಧಿಕಾರಿ ನವೀನ್ ಚಂದ್ರ ಉಪಸ್ಥಿತರಿದ್ದರು ಸಂಪತ್ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
13/01/2021 02:25 pm