ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕರ ಮೇಲೆ ಕತ್ತಿ ಬೀಸಿದ ಜಾರ್ಖಾಂಡ್ ಮೂಲದ ವ್ಯಕ್ತಿ!

ಸುರತ್ಕಲ್: ಕತ್ತಿ ಬೀಸಿಕೊಂಡು, ಬೆದರಿಸಿಕೊಂಡ ಹಲ್ಲೆ ನಡೆಸಿ, ಬಸ್‌ಗೆ ಕಲ್ಲು ತೂರಾಟ ನಡೆಸಿರುವ ಜಾರ್ಖಾಂಡ್ ಮೂಲದ ವ್ಯಕ್ತಿಯನ್ನು ಸುರತ್ಕಲ್ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುರತ್ಕಲ್ ನಿವಾಸಿ ವೆಂಕಪ್ಪ ಹಲ್ಲೆಗೊಳಗಾದವರು. ಜಾರ್ಖಂಡ್ ಮೂಲದ ಅತುಲ್ ಕಲ್ಲು (30) ಎಂಬಾತ ಹಲ್ಲೆ ನಡೆಸಿದಾತ. ಈತನಿಗೂ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿದ್ದಾರೆ. ಇದೀಗ ವೆಂಕಪ್ಪ ಹಾಗೂ ಅತುಲ್ ಕಲ್ಲುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೋವಾದಿಂದ ಕಾಸರಗೋಡಿಗೆ ತೆರಳುತ್ತಿದ್ದ ಆರೋಪಿ ಅತುಲ್ ಕಲ್ಲು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದಾನೆ. ಸುರತ್ಕಲ್ ನಿಂದ ಕಾನ ಎಂಬಲ್ಲಿಗೆ ತೆರಳಿದ್ದು ಅಲ್ಲಿ ತನ್ನ ಕೈಯಲ್ಲಿದ್ದ ಕತ್ತಿಯನ್ನು ಸಾರ್ವಜನಿಕರ ಮೇಲೆ ಬೀಸಿದ್ದಾನೆ ಎನ್ನಲಾಗಿದೆ. ಪರಿಣಾಮ ವೆಂಕಪ್ಪ ಎಂಬವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸಾರ್ವಜನಿಕರು ಆರೋಪಿ ಅತುಲ್ ಕಲ್ಲುವನ್ನು ಹಿಡಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪರಿಣಾಮ ಆತನೂ ಗಾಯಗೊಂಡಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿದ್ದ ವೆಂಕಪ್ಪ ಮತ್ತು ಆರೋಪಿ ಅತುಲ್ ಕಲ್ಲು ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

19/08/2022 04:06 pm

Cinque Terre

4.66 K

Cinque Terre

0

ಸಂಬಂಧಿತ ಸುದ್ದಿ