ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕೈಕಂಬ ಕೋಟೆಸಾರು ನದಿಯಲ್ಲಿ ಮಹಿಳೆ ಶವ ಪತ್ತೆ; ಮಾಹಿತಿ ನೀಡಲು ಕೋರಿಕೆ

ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬದ ಕೋಟೆಸಾರು ನದಿಯಲ್ಲಿ ಸುಮಾರು 65 ರಿಂದ 70ರ ಹರೆಯದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಈ ವಯೋವೃದ್ಧ ಮಹಿಳೆಯ ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮೃತದೇಹದ ಸಮೀಪ ಚಪ್ಪಲಿ ಹಾಗೂ ಕೈಯಲ್ಲಿ ಕನ್ನಡಕ ಇರುವುದು ಕಂಡುಬಂದಿದೆ. ಕೆಂಪು ಬಣ್ಣದ ರವಿಕೆ ಮತ್ತು ಬಿಳಿ ಸೀರೆ ತೊಟ್ಟಿದ್ದಾರೆ. ಈ ಮಹಿಳೆ ಯಾರು ಎಂಬುದು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇವರ ಬಗ್ಗೆ ಮಾಹಿತಿ ಇರುವವರು ಕಡಬ ಪೊಲೀಸ್ ಠಾಣೆಯ 08251-260044 ನಂಬರ್ ಗೆ ತಿಳಿಸುವಂತೆ ಕಡಬ ಪೊಲೀಸರು ಮನವಿ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

25/02/2021 11:16 am

Cinque Terre

10.53 K

Cinque Terre

0

ಸಂಬಂಧಿತ ಸುದ್ದಿ