ಮಂಗಳೂರು: ನಗರದ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ್ಯಾಪ್ ಕಿನ್ ಒಳಗಡೆ ಬಚ್ಚಿಟ್ಟು ಹಾಗೂ ಪುಡಿರೂಪದಲ್ಲಿ ಅಂಟಿನೊಳಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 53 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿ, ಮಹಿಳೆ ಸಹಿತ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ಮಹಿಳೆ ಮತ್ತು ಮತ್ತೋರ್ವ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಪಾಸಣೆ ನಡೆಸಿರುವ ಕಸ್ಟಮ್ ಅಧಿಕಾರಿಗಳು ಕಾಸರಗೋಡು ಮೂಲದ ಫಾತಿಮಾ ಕೊಟ್ಟಚ್ಚೇರಿ ಎಂಬಾಕೆಯ ಬಳಿಯಿಂದ 805 ಗ್ರಾಂ ತೂಕದ 38,88,150 ರೂ. ಹಾಗೂ ಭಟ್ಕಳ ಮೂಲದ ಮೊಹಮ್ಮದ್ ಮೊಯ್ದೀನ್ ಎಂಬಾತನಿಂದ 303 ಗ್ರಾಂ ತೂಕದ 14,63,490 ರೂ. ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇವರು ಒಟ್ಟು ಒಂದು ಕೆಜಿ ತೂಕದ 53 ಲಕ್ಷ ರೂ. ಮೌಲ್ಯದ ಚಿನ್ನವನ್ನು ಫಾತಿಮಾ ಕೊಟ್ಟಚ್ಚೇರಿ ಸ್ಯಾನಿಟರಿ ನ್ಯಾಪ್ ಕಿನ್ ನೊಳಗೆ ಬಚ್ಚಿಟ್ಟು ಹಾಗೂ ಮೊಹಮ್ಮದ್ ಮೊಯ್ದೀನ್ ಪುಡಿ ರೂಪದಲ್ಲಿರುವ ಚಿನ್ನವನ್ನು ಪೇಸ್ಟ್ ಗೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು. ತಕ್ಷಣ ಇವರನ್ನು ಬಂಧಿಸಿದ ಕಸ್ಟಮ್ ಅಧಿಕಾರಿಗಳು ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
18/02/2021 07:10 pm